ಉತ್ತರಪ್ರದೇಶ: ಪ್ರಯಾಗ್ ರಾಜ್ ನಲ್ಲಿ ಅನೇಕ ದಿನಗಳಿಂದ ಮಹಾಕುಂಭಮೇಳ ಅತ್ಯಂತ ಪಾವಿತ್ರಿಕವಾಗಿ ನೆರವೇರಿತು. ಹಿಂದೂ ಮುಖಂಡರು ಸೇರಿದಂತೆ ಸೆಲೆಬ್ರೆಟಿಗಳು, ರಾಜಕೀಯ ಮುಖಂಡರು, ಕುಂಭಮೇಳದ ವ್ಯವಸ್ಥೆಯನ್ನು ಅಲ್ಲಗಳೆದವರೂ ಇಲ್ಲಿ ಪುಣ್ಯ ಸ್ನಾನ ಮಾಡುವುದರ ಮುಖೇನ ಸಾರ್ಥಕರಾದರು.
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಮುಂದಾಳತ್ವದಲ್ಲಿ ಅದೆಷ್ಟೋ ಸಾವಿರ ವರ್ಷಗಳ ಬಳಿಕ ನಡೆದ ಮಹಾಕುಂಭಮೇಳ ಯಶಸ್ವಿಯಾಗಿ ನೆರವೇರಿತು. ಇದೀಗ ದ.ಕ ಜಿಲ್ಲೆಯ ಹಿಂದೂ ಹುಲಿ ಪ್ರಯಾಗ್ ರಾಜ್ ಗೆ ಭೇಟಿ ನೀಡಿದ್ದಾರೆ.
ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನ ಮಾಡಿದ ಅರುಣ್ ಕುಮಾರ್ ಪುತ್ತಿಲ...!
ಅದೆಷ್ಟೋ ಅಘೋರಿಗಳು, ಸಾಧು ಸಂತರುಗಳ ಪಾದ ಸ್ಪರ್ಶಗೊಂಡ ಪುಣ್ಯ ನೆಲದಲ್ಲಿ ಮಹಾಕುಂಭಮೇಳ ಮಹಾಶಿವರಾತ್ರಿಯಂದು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಕುಂಭಮೇಳದ ಅಂತಿಮ ದಿನದಂದು ಅರುಣ್ ಕುಮಾರ್ ಪುತ್ತಿಲ ಅವರು ಭೇಟಿ ನೀಡಿ, ತ್ರಿವೇಣಿ ಸಂಗಮದಲ್ಲಿ ಮೀದು ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.
ನೂರ ನಲವತ್ತ ನಾಲ್ಕು ವರ್ಷಗಳ ನಂತರ ನಡೆಯುವ ಈ ಈ ಐತಿಹಾಸಿಕ ಹಿಂದೂಗಳ ಪವಿತ್ರ ಆಚರಣೆಯ ಕೊನೆಯ ದಿನ ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ತೀರ್ಥಸ್ನಾನ ಮಾಡಿ ಪುನೀತರಾಗಿದ್ದಾರೆ. ನಾಡಿನ ಶ್ರೇಯಸ್ಸಿಗಾಗಿ ಪ್ರಾರ್ಥಿಸಿದ್ದಾರೆ.
ಕುಂಭಮೇಳದಲ್ಲಿ ಭಾಗಿಯಾಗಿ ಪುತ್ತಿಲ ಏನ್ ಹೇಳಿದ್ರು ಗೊತ್ತಾ..?
ಮಹಾಶಿವರಾತ್ರಿಯ ಈ ಕೊನೆಯ ಮಹಾಕುಂಭಮೇಳದ ದಿನ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಪಾಲ್ಗೊಳ್ಳಲು ನನಗೆ ಅವಕಾಶ ಸಿಕ್ಕಿರೋದೆ ಸೌಭಾಗ್ಯ. ಇದೊಂದು ಮರೆಯಲಾಗದ ಅದ್ಭುತ ಆಧ್ಯಾತ್ಮಿಕ ಅನುಭವ. ಈ ಪುಣ್ಯಸ್ನಾನದಿಂದ ನವ ಚೈತನ್ಯ ಪುಟಿದೇಳಿದೆ. ಈ ವ್ಯವಸ್ಥೆಯನ್ನು ಯುಪಿ ಸರ್ಕಾರ ಅಚ್ಚುಕಟ್ಟಾಗಿ ನಿರ್ವಹಿಸಿದೆ. ಹಿಂದೂಗಳಿಗೆ ಇದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.