ಅಕ್ಕಾ..ಅಕ್ಕಾ ಅಂತ ಕರೆದವನೇ ಅತ್ಯಾಚಾರ ಮಾಡಿಬಿಟ್ಟ!; ಕಲ್ಲನ್ನೂ ಕರಗಿಸುವ ರಣಭೀಕರ ಅತ್ಯಾಚಾರ ಪ್ರಕರಣ!

  • 28 Feb 2025 01:49:14 PM

ಹಿಂದೊಮ್ಮೆ ದೆಹಲಿಯಲ್ಲಿ ನಿರ್ಭಯಾ ಎನ್ನುವ ಯುವತಿಯ ಮೇಲೆ ರೈಲಿನಲ್ಲಿ ಭೀಕರ ಅತ್ಯಾಚಾರ ನಡೆಸಿದ ಘಟನೆ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು.‌ಇದೀಗ ಅಂತಹದ್ದೇ ರಣಭೀಕರ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಅಕ್ಕಾ..ಅಕ್ಕಾ..ಎಂದು ಕರೆದವನೇ ಯುವತಿಯನ್ನು ಬಸ್ಸಿಗೆ ಹತ್ತಿಸಿ ಅತ್ಯಾಚಾರ ಎಸಗಿದ್ದಾನೆ. ಈ ಘಟನೆಯ ಇಂಚಿಂಚೂ ಮಾಹಿತಿ ಇಲ್ಲಿದೆ ನೋಡಿ.

 

ಅಕ್ಕಾ..ಎಂದವನೇ ಅತ್ಯಾಚಾರ ಮಾಡಿದ!

 

ಈ ಘಟನೆ ನಡೆದಿರುವುದು ಮಹಾರಾಷ್ಟ್ರದಲ್ಲಿ.ಇಲ್ಲಿನ ಬಸ್ ಡಿಪೋ ಒಂದರಲ್ಲಿ ಬೆಳಗ್ಗೆ 6 ಗಂಟೆಗೆ ಬಸ್ಸಿಗೆ ಕಾಯುತ್ತಿದ್ದ ಯುವತಿಯನ್ನು 36 ವರ್ಷದ ದತ್ತಾತ್ರೇಯ ರಾಮದಾಸ್ ಎಂಬಾತ ಅಕ್ಕಾ..ಅಕ್ಕಾ.. ಎಂದು ಕರೆದು ಡಿಪೋದ ಮೂಲೆಯಲ್ಲಿ ನಿಂತಿದ್ದ ಬಸ್ ಗೆ ಕರೆದೊಯ್ದಿದ್ದಾನೆ. 'ಬಸ್ ಖಾಲಿ ಇದೆಯಲ್ಲಾ' ಎಂದಾಗ. 'ಇಲ್ಲ ಎಲ್ಲರೂ ಮಲಗಿದ್ದಾರೆ' ಎಂದು ಕತೆ ಕಟ್ಟಿದ ಆರೋಪಿ ಯುವತಿಯನ್ನು ಬಸ್ಸಿಗೆ ಹತ್ತಿಸಿದ್ದಾನೆ.‌

 

ಪೊಲೀಸರ ಕೈಗೆ ಸಿಗದ ಆರೋಪಿ!

 

ಯುವತಿಯನ್ನು ಬಸ್ ಹತ್ತಿಸಿದ ಆರೋಪಿ ಬಳಿಕ ಬಸ್ ಡೋರ್ ಲಾಕ್ ಮಾಡಿ ಅತ್ಯಾಚಾರ ಎಸಗಿ ಬಳಿಕ‌ ಅಲ್ಲಿಂದ ಪರಾರಿಯಾಗಿದ್ದಾನೆ‌.‌ ಸಂತ್ರಸ್ತ ಯುವತಿ ಪೊಲೀಸ್ ದೂರು ನೀಡಿದ್ದು, ಆರೋಪಿ ಇನ್ನೂ ಕೂಡ ಪೊಲೀಸರ ಕೈಗೆ ಸಿಕ್ಕಿಲ್ಲ. ಜೊತೆಗೆ ಈತನ ಬಗ್ಗೆ ಮಾಹಿತಿ ನೀಡಿದವರಿಗೆ ಬರೋಬ್ಬರಿ 1 ಲಕ್ಷ ಬಹುಮಾನವನ್ನು ಮಹಾರಾಷ್ಟ್ರ ಪೊಲೀಸ್ ಇಲಾಖೆ ಘೋಷಿಸಿದೆ.