ಹಾಸನ: ಶುಕ್ರವಾರ ಮಧ್ಯರಾತ್ರಿ ಹಾಸನದಿಂದ ಕೇರಳಕ್ಕೆ ಅಕ್ರಮ ಗೋಸಾಗಾಟ ಮಾಡುತ್ತಿದ್ದ ಈಚಾರ್ ಎಂಬ ಲಾರಿಯನ್ನು ರಾಮಧೂತ ಹಿಂದೂ ಮಹಾಗಣಪತಿ ಸಮಿತಿಯ ಕಾರ್ಯಕರ್ತರು ಪೋಲಿಸರ ಸಹಯೋಗದಲ್ಲಿ ತಡೆದು ಗೋರಕ್ಷಣೆ ಮಾಡಿದ್ದಾರೆ.
KA-46-2572 ಲಾರಿಯು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವೇಳೆಯಲ್ಲಿ ಅನುಮಾನಗೊಂಡ ಕಾರ್ಯಕರ್ತರು ಹಿಂಬಾಲಿಸಿ ಹೋಗಿ ಮಳಳ್ಳಿ ಬೈಪಾಸ್ ಬಳಿ ತಡೆದು ಪರಿಶೀಲಿಸಿದ ಸಮಯದಲ್ಲಿ ಅದರೊಳಗೆ 17 ಗೋವುಗಳನ್ನು ವಾಹನದೊಳಗೆ ಉಸಿರು ಕಟ್ಟುವ ರೀತಿ ಟಾರ್ಪಲ್ ಬಳಿಸಿ ಮುಚ್ಚಿ ತಕ್ಷಣ ಯಾರು ನೋಡಿದರೂ ಸಹ ಅನುಮಾನ ಬಾರದೇ ಇರುವ ರೀತಿಯಲ್ಲಿ ತರಕಾರಿ ವಾಹನ ಎಂಬಂತೆ ಮಾರ್ಪಡಿಸಿ ಗೋವುಗಳನ್ನು ತುಂಬಲಾಗಿತ್ತು.
ನಗರ ಠಾಣೆಯ ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದ ತಂಡ ಹಿಂದೂ ಕಾರ್ಯಕರ್ತರ ಸಹಯೋಗದಲ್ಲಿ ಟೋಲ್ ಗೇಟ್ ಸಮಿತಿ ಬೈಪಾಸ್ ರಸ್ತೆಯಲ್ಲಿ ವಾಹನ ತಡೆದು ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ರಕ್ಷಿಸಲಾದ 17 ಗೋವುಗಳನ್ನು ಪ್ರತ್ಯೇಕ ವಾಹನದಲ್ಲಿ ಬಾಣಾವರದ ಗೋಶಾಲೆಗೆ ಸಾಗಿಸಲಾಯಿತು. ಪೊಲೀಸರು ಈ ಕುರಿತಾಗಿ ತನಿಖೆ ಮುಂದುವರಿಸಿದ್ದಾರೆ.