ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಅನೇಕ ಕಾಂಗ್ರೆಸ್ ನ ನಾಯಕರು ಕೂಡಾ ಭಾಗಿಯಾಗಿದ್ದರು. ಮಹಾಕುಂಭಮೇಳದ ವ್ಯವಸ್ಥೆಯ ಬಗ್ಗೆ ಇತರ ಕಾಂಗ್ರೆಸ್ ನಾಯಕರು ಟೀಕೆ ಮಾಡಿದ್ದರು. ಇದೀಗ ಕಾಂಗ್ರೆಸ್ ನಾಯಕರೇ ಮಹಾಕುಂಭಮೇಳದಲ್ಲಿ ಭಾಗವಹಿಸಿದಕ್ಕೆ ಆಕ್ರೋಶ ವ್ಯಕ್ತವಾಗಿರುವುದಲ್ಲದೆ ಅನೇಕ ಟೀಕಾತ್ಮಕ ಮಾತುಗಳು ಕೇಳಿಬಂದಿದೆ. ಇದೀಗ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅದಕ್ಕೆ ತಿರುಗೇಟು ನೀಡಿದ್ದಾರೆ.
ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿಯೇ ಸಾಯ್ತೇನೆ-ಡಿಕೆಶಿ..!
ಡಿಕೆ ಶಿವಕುಮಾರ್ ದಂಪತಿ ಮೊನ್ನೆ ತಾನೇ ಮಹಾಕುಂಭಮೇಳದಲ್ಲಿ ಭಾಗವಹಿಸಿ ತೀರ್ಥಸ್ನಾನ ಮಾಡಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಡಿಕೆಶಿ ಪ್ರತ್ಯುತ್ತರ ನೀಡಿದ್ದಾರೆ. ನಾನು ಎಲ್ಲಾ ಧರ್ಮವನ್ನು ಗೌರವಿಸುತ್ತೇನೆ. ನಾನು ಹಿಂದೂವಾಗಿಯೇ ಹುಟ್ಟಿದ್ದೇನೆ. ಹಿಂದೂ ಆಗಿ ಸಾಯ್ತೇನೆ.
ಅಮಿತ್ ಶಾ ಜೊತೆಗೆ ಡಿಕೆಶಿ!
ಇದಿಷ್ಟೇ ಅಲ್ಲದೇ ಇತ್ತೀಚೆಗೆ ಸದ್ಗುರು ಅವರ ನೇತೃತ್ವದಲ್ಲಿ ಆದಿಯೋಗಿಯಲ್ಲಿ ನಡೆದ ಮಹಾ ಶಿವರಾತ್ರಿ ಉತ್ಸವದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಡಿಕೆಶಿ ವೇದಿಕೆ ಹಂಚಿಕೊಂಡಿದ್ದರು. ಈ ಎಲ್ಲ ಬೆಳವಣಿಗಳನ್ನು ಗಮನಿಸುತ್ತಿರುವ ರಾಜ್ಯದ ಜನತೆ ಕಾಂಗ್ರೇಸ್ ಬಂಡೆ ಬಿಜೆಪಿಯ ಕಡೆಗೆ ವಾಲುತ್ತಿದೆ ಎನ್ನುತ್ತಿದ್ದಾರೆ. ಡಿಕೆಶಿ ಅವರ ಮುಂದಿನ ನಡೆಯನ್ನು ಇನ್ನಷ್ಟೇ ಕಾದು ನೋಡಬೇಕಿದೆ.