ಸುರತ್ಕಲ್: ಸುರತ್ಕಲ್‌ನಲ್ಲಿ ಹಿಂದೂ ಯುವತಿಯನ್ನು ಬೆದರಿಸಿದ ಅನ್ಯ ಮತೀಯ ಯುವಕ ಶಾರಿಕ್ ಗೆ ಜಾಮೀನು ದೊರಕಿದೆ. "ನೀನು ಒಪ್ಪದಿದ್ದರೆ, 24 ತುಂಡು ಮಾಡುವೆ" ಎಂದು ಬೆದರಿಕೆ ಹಾಕಿದ ಶಾರಿಕ್, ಯುವತಿಗೆ ಅಸಭ್ಯ ಸಂದೇಶಗಳನ್ನು ಕಳುಹಿಸುತ್ತಿದ್ದನು. ಈ ಸಂಬಂಧ, ಯುವತಿಯ ಸಹೋದರನಿಗೆ ಬೆದರಿಕೆ ಮತ್ತು ನಿಂದನೆಯ ಸಂದೇಶಗಳು ತಲುಪಿದ್ದವು.
ನಿರಂತರ ಕಿರುಕುಳದಿಂದ ಬೇಸತ್ತಿದ್ದಳು ಮತ್ತು ಆತ್ಮಹತ್ಯೆ ಯತ್ನ ಮಾಡಿದ್ದು, "ಅನ್ಯಮತೀಯನ ಕೈಯಲ್ಲಿ ಸಾಯುವುದಕ್ಕಿಂತ, ಈಗಲೇ ಸಾಯುತ್ತೇನೆ" ಎಂದು ಡೆತ್ ನೋಟ್ ಬರೆದಿದ್ದಾಳೆ. ಇದರಲ್ಲೂ ಶಾರಿಕ್ ಮತ್ತು ನೂರ್‌ಜಹಾನ ನನ್ನು ಬಿಡಬಾರದು ಎಂದು ಬರೆದಿದ್ದಳು.
ಈ ಘಟನೆಗಳಿಗೆ ಸಂಬಂಧಿಸಿದಂತೆ, ಈಗ ಶಾರಿಕ್ ಗೆ ಜಾಮೀನು ದೊರಕಿರುವುದು ಯುವತಿಯ ಸಂರಕ್ಷಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟಿಸಿದೆ. ವಿ ಎಚ್ ಪಿ, ಹಿಂದೂ ಜಾಗರಣ ವೇದಿಕೆ, ಹಿಂದೂ ಮಹಾಸಭಾ ಮತ್ತು ಸ್ಥಳೀಯರು, ಆರೋಪಿ ಮೇಲಿನ ಸರಳ ಕ್ರಮಗಳನ್ನು ಕೈಗೊಂಡ ವಿಷಯದ ಬಗ್ಗೆ ಪ್ರಾರಂಭದಲ್ಲೇ ತೀವ್ರವಾಗಿ ಖಂಡಿಸಿದ್ದಾರೆ ಹಾಗೂ ಇದರಿಂದ ಉಂಟಾಗುವ ಯುವತಿಯ ಸಂರಕ್ಷಣೆಯ ಕುರಿತು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.