ಭೋಪಾಲ್: ದೇಶ ಎಷ್ಟೇ ಮುಂದುವರೆದರೂ ಕೂಡ ಇಲ್ಲಿ ಅತ್ಯಾಚಾರ ಪ್ರಕರಣಗಳಿಗೆ ಕಠಿಣ ಶಿಕ್ಷೆಯಾಗುವ ವರೆಗೆ ರಣಭೀಕರ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಸದ್ಯ, ಇದೀಗ ಬೆಳಕಿಗೆ ಬಂದಿರುವ ಅತ್ಯಾಚಾರ ಪ್ರಕರಣವೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. 5 ವರ್ಷದ ಬಾಲಕಿಯ ಮೇಲೆ 17 ವರ್ಷದ ಬಾಲಕ ಭೀಕರವಾಗಿ ಅತ್ಯಾಚಾರ ನಡೆಸಿದ್ದು, ಈತನ ವಿಕೃತ ಹಿಂಸೆಯಿಂದಾಗಿ ಬಾಲಕಿಯ ಖಾಸಗಿ ಅಂಗಕ್ಕೆ 28 ಹೊಲಿಗೆ ಹಾಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಘಟನೆಯ ಕಂಪ್ಲೀಟ್ ಡೀಟಿಯಲ್ಸ್ ಇಲ್ಲಿದೆ.
ಮನೆ ಚಾವಣಿಯ ಮೇಲೆ ಅತ್ಯಾಚಾರ!
ಈ ಘಟನೆ ಭೋಪಾಲ್ ನಲ್ಲಿ ಫೆ.22ರಂದು ನಡೆದಿದೆ. ಬಾಲಕ ಪಕ್ಕದ ಮನೆಯ ಅಂಗಳದಲ್ಲಿ ಆಡುತ್ತಿದ್ದ 5 ವರ್ಷದ ಬಾಲಕಿಯನ್ನು ತನ್ನ ಮನೆಯ ಚಾವಣಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಇದಿಷ್ಟೇ ಅಲ್ಲದೆ ಈ 17 ವರ್ಷದ ವಿಕೃತ ಕಾಮಿ ಬಾಲಕಿಗೆ ಚಿತ್ರ ಹಿಂಸೆ ನೀಡಿ, ಆಕೆಯ ಖಾಸಗಿ ಅಂಗಗಳಿಗೆ ಹಾನಿ ಮಾಡಿದ್ದಾನೆ. ಇದರಿಂದ ಕಂಗಾಲಾದ ಬಾಲಕಿ ಪ್ರಜ್ಞೆ ತಪ್ಪಿದ್ದಾಳೆ.
ಖಾಸಗಿ ಅಂಗಕ್ಕೆ 28 ಹೊಲಿಗೆ!
ಬಾಲಕನ ವಿಕೃತ ಹಿಂಸೆಯಿಂದಾಗಿ ಅಪ್ರಾಪ್ತ ಬಾಲಕಿಯ ಖಾಸಗಿ ಅಂಗಕ್ಕೆ ತೀವ್ರತರ ಗಾಯವಾಗಿದ್ದು, 28 ಹೊಲಿಗೆ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ತೀವ್ರವಾಗಿ ಆಕ್ರೋಶ ಹೊರ ಹಾಕಿರುವ ಕೇಂದ್ರ ಸಚಿವ ಜ್ಯೋತಿರಾಧಿತ್ಯ, 'ಇಂತಹ ಘಟನೆ ಇನ್ನೆಂದಿಗೂ ನಡೆಯ ಬಾರದು. ಆರೋಪಿ ಬಾಲಕನಿಗೆ ಕಠಿಣ ಶಿಕ್ಷೆಯಾಗಬೇಕು' ಎಂದು ಒತ್ತಾಯಿಸಿದ್ದಾರೆ.