17 ವರ್ಷದ ದಿಗಂತ್ ನಾಪತ್ತೆಯಾಗಿ 4 ದಿನ ಕಳೆದರೂ ಪೊಲೀಸರಿಂದ ಸ್ಪಂದನೆ ಇಲ್ಲ!; ನಾಳೆ ಫರಂಗಿಪೇಟೆ ಬಂದ್ ಹಾಗೂ ಬೃಹತ್ ಪ್ರತಿಭಟನೆ

  • 28 Feb 2025 07:31:30 PM

ಫರಂಗಿಪೇಟೆ: ಆಂಜನೇಯ ದೇವಸ್ಥಾನದ ಪೂಜೆಗೆಂದು ಮನೆಯಿಂದ ಹೊರಟ 17 ವರ್ಷದ ದಿಗಂತ್ ಕಳೆದ 4 ದಿನಗಳಿಂದ ನಾಪತ್ತೆಯಾಗಿರುತ್ತಾನೆ. ನಾಪತ್ತೆ ಪ್ರಕರಣ ದಾಖಲಿಸಿದರು ಶಾ ಇದುವರೆಗೆ ಪೊಲೀಸರು ಯಾವುದೇ ರೀತಿಯ ಸ್ಪಂದನೆ ನೀಡಿಲ್ಲ ಎಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

 

ಪೊಲೀಸರ ನಿರ್ಲಕ್ಷ್ಯ ಮನೋಭಾವಕ್ಕೇ ವಿರೋಧವಾಗಿ ನಾಳೆ ಶನಿವಾರ ಫರಂಗಿಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ಮತ್ತು ಬೃಹತ್ ಪ್ರತಿಭಟನೆ ನಡೆಸಲಾಗುವುದು. ದಿಗಂತ್‌ ಪತ್ತೆಗೆ ತ್ವರಿತ ಕಾರ್ಯಾಚರಣೆ ಆಗಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.