ಪ್ರಯಾಗ್ ರಾಜ್: ಅನ್ನದಾನ ಮಹಾದಾನ ಎಂಬ ಮಾತಿದೆ. ಹಸಿದು ಬಂದವರಿಗೆ ಊಟ ನೀಡಿದ್ರೆ ದೇವರು ಫಲ ನೀಡುತ್ತಾರೆ ಎಂದು ಜನ ನಂಬುತ್ತಾರೆ. ಅಷ್ಟೊಂದು ಪವಿತ್ರ ಕೆಲಸ ಅದು. ಆದರೆ ಅದರಲ್ಲೂ ಮೋಸ ಮಾಡಿ ಲಾಭ ಗಳಿಸುವ ಪಾಪಿಗಳೂ ಇರುತ್ತಾರೆ. ಅಂತಹ ವಿಚಿತ್ರ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಚರಂಡಿ ನೀರಿನಿಂದ ಹಿಟ್ಟು ಕಲಸಿ ಮಾಡ್ತಿದ್ದ ರೊಟ್ಟಿಯನ್ನೇ ಜನರಿಗೆ ಕೊಡ್ತಿದ್ದ ಪಾಪಿ...!
ಪ್ರಯಾಗ್ ರಾಜ್ ನಲ್ಲಿ ನಡೆದ ಕುಂಭಮೇಳಕ್ಕೆ ಅದೆಷ್ಟೋ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದರು. ಈ ಸಂದರ್ಭ ಕಾನ್ಪುರದ ಸಚೆಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆದ್ದಾರಿಯಲ್ಲಿರೋ ಸಾಗರ್ ಹೊಟೇಲ್ ಮತ್ತು ರೆಸ್ಟೋರೆಂಟ್ ನಲ್ಲಿ ಮಾಡ್ತಾ ಇರೋ ಅನಾಚಾರ ವೀಡಿಯೋದಲ್ಲಿ ಸೆರೆಯಾಗಿದೆ. ಒಬ್ಬ ಕೆಲಸಗಾರ ಚರಂಡಿ ಮೇಲೆ ಕೂತು ಹಿಟ್ಟು ಕಲಸಿ ಅದರಿಂದ ರೊಟ್ಟಿ ಮಾಡಿ ಗ್ರಾಹಕರಿಗೆ ಮಾರುತ್ತಿದ್ದಾರೆ. ರೊಟ್ಟಿ ಮಾಡಲು ಚರಂಡಿ ನೀರನ್ನೇ ಬಳಸುತ್ತಿದ್ದಾರೆ. ಇವರು ಜನರ ಆರೋಗ್ಯದಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸ್ವಚ್ಛತೆಯಲ್ಲಿ ಲೋಪ, ಎಚ್ಚೆತ್ತ ಆಹಾರ ಇಲಾಖೆಯಿಂದ ತನಿಖೆ...!
ಇವರು ಗ್ರಾಹಕರಿಗೆ ಮಾಡುತ್ತಿರುವ ವಂಚನೆ ಬಯಲಿಗೆ ಬರುತ್ತಿದ್ದಂತೆ ಆಹಾರ ಇಲಾಖೆ ಎಚ್ಚೆತ್ತುಕೊಂಡಿದೆ. ತನಿಖೆ ಮಾಡಿದಾಗ ಆ ಸಂದರ್ಭ ಹೋಟೆಲ್ ಬಳಿ ಚರಂಡಿ ಇರಲಿಲ್ಲ ಎಂದು ತಿಳಿದುಬಂದಿದೆ. ಆದರೆ ಹೊಟೇಲ್ ನಲ್ಲಿ ಚೂರು ಸ್ಚಚ್ಛತೆಯನ್ನು ನಿರ್ವಹಿಸದ ಕಾರಣ ಅಧಿಕಾರಿಗಳು ಗರಂ ಆಗಿದ್ದಾರೆ. ಆಹಾರ ಇಲಾಖೆ ಹೊಟೇಲ್ ಮಾಲಕರಿಗೆ ಕ್ಲೀನಿಂಗ್ ನಿರ್ವಹಿಸಲು ವಾರ್ನಿಂಗ್ ಮಾಡಿದ್ದಾರೆ. ಪನೀರ್, ಬೇಳೆ ಮತ್ತು ತರಕಾರಿಯ ಸ್ಯಾಂಪಲ್ ಗಳನ್ನು ಟೆಸ್ಟ್ ಗೆ ಕಳುಹಿಸಲಾಗಿದೆ.