ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್..!! ಕೋಳಿಗಳಿಗೂ ಬಂತು ಹಕ್ಕಿ ಜ್ವರ, ಕರ್ನಾಟಕದಲ್ಲಿ ಹೈ ಅಲರ್ಟ್...!

  • 01 Mar 2025 05:52:13 PM

ಕರ್ನಾಟಕದಲ್ಲಿ ಮಾತ್ರವಲ್ಲ ಬೇರೆ ಬೇರೆ ರಾಜ್ಯಗಳಲ್ಲಿ ನಾವು ಈವರೆಗೂ ಕೇಳಿರದ ವಿಚಿತ್ರ ರೋಗಗಳನ್ನು ನೋಡಿದ್ದೇವೆ. ಜಗತ್ತಿಗೆ ಕೊರೋನಾ ಕಾಲಿಟ್ಟ ಮೇಲಂತೂ ಒಂದೊಂದು ವಿಚಿತ್ರ ರೋಗಗಳ ಹೆಸರು ಕೇಳುವಾಗಲೂ ಭಯವಾಗಿ ಬಿಡುತ್ತದೆ. ಇತ್ತೀಚೆಗೆ ನೆರೆ ರಾಜ್ಯವಾದ ಆಂಧ್ರಪ್ರದೇಶ, ತೆಲಂಗಾಣದಲ್ಲಿ ಹಕ್ಕಿ ಜ್ವರ ರುದ್ರ ನರ್ತನ ಮಾಡಿತ್ತು. ಇದೀಗ ಕರ್ನಾಟಕಕ್ಕೂ ಎಂಟ್ರಿ ಕೊಟ್ಟಿದೆ.

 

ಬಳ್ಳಾರಿಯ ಕೋಳಿ ಫಾರ್ಮ್ ನಲ್ಲಿ ಹಕ್ಕಿಜ್ವರದಿಂದ ಸತ್ತ 2400 ಕೋಳಿಗಳು...!!

 

ಬಳ್ಳಾರಿಯ ಸಂಡೂರು ತಾಲೂಕಿನ ಕುರೇಕುಪ್ಪ ಗ್ರಾಮದ ಕೋಳಿ ಫಾರ್ಮ್ನಲ್ಲಿ ನಿತ್ಯ ಸಾವಿರಾರು ಕೋಳಿಗಳು ಇರುತ್ತಿದ್ದವು. ಆದರೆ ಈಗ ಹಕ್ಕಿ ಜ್ವರದ ಪರಿಣಾಮಕ್ಕೆ ಈಡಾಗಿ ಇಡೀ ಕೋಳಿ ಫಾರ್ಮ್ ಬಣಗುಡುತ್ತಿದೆ. ಫೆಬ್ರವರಿ 21ರಿಂದ ಪೌಲ್ಟ್ರಿ ಫಾರ್ಮ್ನಲ್ಲಿ ಕೋಳಿಗಳು ಹಂತಹಂತವಾಗಿ ಮೃತಪಡುತ್ತಿದ್ದವು. ಅನುಮಾನ ಬಂದ ಅಧಿಕಾರಿಗಳು ಸತ್ತ ಕೋಳಿಗಳನ್ನು ಪ್ರಯೋಗಾಲಕ್ಕೆ ಕಳುಹಿಸಿದ್ದರು.

 

ಪ್ರಯೋಗಾಲಯ ವರದಿಯಲ್ಲಿ ಹಕ್ಕಿ ಜ್ವರ ದೃಢಪಟ್ಟಿತ್ತು. ಇದೊಂದೇ ಫಾರ್ಮ್ನಲ್ಲಿ ಈವರೆಗೆ 2,400 ಕೋಳಿಗಳು ಹಕ್ಕಿಜ್ವರಕ್ಕೆ ತುತ್ತಾಗಿವೆ. ಈ ಪೈಕಿ ಅಧಿಕಾರಿಗಳೇ 1,020 ಕೋಳಿಗಳ ವಧೆ ಮಾಡಿ ಹೂತು ಹಾಕಿದ್ದಾರೆ. ನಿಜಕ್ಕೂ ಇದು ಕೋಳಿ ಪ್ರಿಯರಿಗೆ ಶಾಕ್ ತಂದಿದೆ.

 

ಗಡಿಭಾಗದಲ್ಲಿ ಕೋಳಿ ಉತ್ಪನ್ನ ನಿಷೇಧ, ಅಧಿಕಾರಿಗಳಿಂದ ಮನೆ ಮನೆ ಸಮೀಕ್ಷೆ..!

 

ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ದೃಢಪಟ್ಟ ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಖತ್ ಆಕ್ಟೀವ್ ಆಗಿದೆ. ಇದೀಗ ಇಲಾಖಾ ಅಧಿಕಾರಿಗಳು ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಿ ವರದಿ ಸಂಗ್ರಹಿಸುತ್ತಿದ್ದಾರೆ. ಇದು ಮನುಷ್ಯರಿಗೆ ಹರಡದಂತೆಯೂ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ್ದಾರೆ.

 

ಗಡಿಭಾಗಗಳಲ್ಲಿ ಕೋಳಿ ಉತ್ಪನ್ನ, ಹಕ್ಕಿ ಸಾಗಾಣಿಕೆಗೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಗಡಿಭಾಗದ ಚೆಕ್ಪೋಸ್ಟ್ಗಳಲ್ಲಿ ಪರಿಶೀಲಿಸುವಂತೆ ಸೂಚಿಸಲಾಗಿದೆ. ಮುಂಜಾಗ್ರತಾ ಕ್ರಮ ಕೂಡಾ ವಹಿಸುವಂತೆ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.