ಫರಂಗಿಪೇಟೆ: ಐದಾರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಫರಂಗಿಪೇಟೆ ಸಮೀಪದ ಕಿದೆಬೆಟ್ಟಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣದ ತನಿಖೆಯು ವಿವಿಧ ಆಯಾಮಗಳಲ್ಲಿ ನಡೆಯುತ್ತಿದೆ. ಆದರೂ ನಿನ್ನೆಯ ವರೆಗೆ ಯಾವುದೇ ಮಹತ್ವದ ಮಾಹಿತಿ ದೊರೆತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಲ್ಲಿಯವರೆಗೆ ನಡೆಸಿದ ತನಿಖೆಯಲ್ಲಿ ದಿಗಂತ್ ನಾಪತ್ತೆಯಾಗಿರುವುದರ ಬಗ್ಗೆ ಸುಳಿವು ಇಲ್ಲದಿರುವುದರಿಂದ ನಿಗೂಢವಾಗಿಯೇ ಉಳಿದಿದೆ. ಆತ ಎಲ್ಲಿದ್ದಾನೆ? ಏನಾಯ್ತು?? ಎಂಬುದರ ಬಗ್ಗೆಗಿನ ನಿಗೂಢತೆ ಪೊಲೀಸರ ಮುಂದಿರುವ ಸವಾಲು ಮತ್ತಷ್ಟು ಕಠಿಣವಾಗಿದೆ.
ದಿಗಂತ್ ಪತ್ತೆಗಾಗಿ ಪೊಲೀಸರು ಮೊಬೈಲ್ ಕಾಲ್ ಡೇಟಾ ಹಾಗೂ ಸ್ನೇಹಿತರು, ಕುಟುಂಬಸ್ಥರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಕಾರ್ಯ ಮುಂದುವರೆಸಿದ್ದಾರೆ. ಸ್ಥಳೀಯರು, ದಿಗಂತ್ ಕುಟುಂಬದವರು ಹಾಗೂ ಆತನು ಸಂಪರ್ಕದಲ್ಲಿದ್ದವರನ್ನು ವಿಚಾರಣೆ ನಡೆಸಿ, ತನಿಖೆಯನ್ನು ತ್ವರಿತಗೊಳಿಸಲು ಪೊಲೀಸರು ಬಲವಾದ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಪ್ರಕರಣವನ್ನು ಭೇದಿಸುವಂತೆ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೆಚ್ಚುತ್ತಿದೆ. ಹೀಗಾಗಿ ಗರಿಷ್ಠ ಪ್ರಯತ್ನ ಮಾಡಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಭರವಸೆಯನ್ನು ನೀಡಿದ್ದಾರೆ.