ಕಾಸರಗೋಡು: ನೆಲ್ಲಿಕಟ್ಟೆಯ ಅಬ್ದುಲ್ ರಜಾಕ್ ಎಂಬಾತನ ಮೇಲೆ ತ್ರಿವಳಿ ತಲಾಕ್ ಘೋಷಿಸಿದ ಆರೋಪದ ಮೇಲೆ ರವಿವಾರ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೆಬ್ರವರಿ 21ರಂದು ವಾಟ್ಸಾಪ್ ವಾಯ್ಸ್ ಮೆಸೇಜ್ ಮೂಲಕ ಪತಿ ವಿಚ್ಛೇದನ ನೀಡಿದ್ದಾರೆ ಎಂದು ದೂರು ನೀಡಿದ್ದಾಳೆ.
ಯುಎಇ ಯಲ್ಲಿ ಕೆಲಸ ಮಾಡುತ್ತಿರುವ ರಜಾಕ್ ತನ್ನ ತಂದೆಯ ವಾಟ್ಸಾಪ್ ನಂಬರ್ ಗೆ ತಲಾಖ್ ಸಂದೇಶ ಕಳುಹಿಸಿದ್ದಾನೆ ಎಂದೂ ಅಲ್ಲದೆ, ಗಂಡನ ಕುಟುಂಬದಿಂದ ನಿರಂತರವಾಗಿ ವರದಕ್ಷಿಣೆ ಕಿರುಕುಳ ಎದುರಿಸುತ್ತಿದ್ದೇನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳೆಯ ತಂದೆಯು ರಜಾಕ್ ₹12 ಲಕ್ಷ ವಂಚಿಸಿದ್ದಾನೆ ಎಂದು ಆರೋಪಿಸಿದ್ದಾನೆ. ಈ ದೂರಿನ ಪ್ರಕಾರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506(4) ಮತ್ತು ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಪತಿಯ ಸಂಬಂಧಿಕರು ಸಹ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂಬ ಆರೋಪವೂ ಇದ್ದರಿಂದ ಈ ಸಂಬಂಧ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.