ದಿಗಂತ್ ನಾಪತ್ತೆ ಪ್ರಕರಣ: ಪೊಲೀಸರ ವಿಫಲತೆ ಮುಂದುವರೆದರೆ ‘ಫರಂಗಿಪೇಟೆ ಛಲೋ’ಗೆ ಕರೆ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಕ್ಷೇತ್ರೀಯ ಮುಖಂಡರಾದ ಜಗದೀಶ್ ಕಾರಂತ್ ಅವರ ತೀವ್ರ ಎಚ್ಚರಿಕೆ!

  • 02 Mar 2025 10:56:50 PM

ಫರಂಗಿಪೇಟೆಯ ದಿಗಂತ್‌ ನಾಪತ್ತಿಯಾಗಿದ್ದು ಇವತ್ತಿಗೆ ನಾಲ್ಕು ದಿನಗಳು ಕಳೆದಿವೆ. ಈ ಅವಧಿಯಲ್ಲಿ ಈ ಕ್ಷಣದವರೆಗೂ ಪೊಲೀಸರು ಪ್ರಕರಣದ ಹಿಂದಿನ ನಿಗೂಢತೆಯನ್ನು ಪತ್ತೆ ಹಚ್ಚಲು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಕ್ಷೇತ್ರೀಯ ಮುಖಂಡರಾದ ಜಗದೀಶ್ ಕಾರಂತ್ ಅವರು ದಿಗಂತ್ ನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ತುಂಬಿದರು.  

 

 

ಪಿಯುಸಿ ವಿದ್ಯಾರ್ಥಿಯಾಗಿರುವ ದಿಗಂತ್ ಅವರನ್ನು ತಕ್ಷಣ ಪತ್ತೆ ಮಾಡಬೇಕು ಪತ್ತೆಯಾಗದಿದ್ದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಎಲ್ಲಾ ಹಿಂದೂ ಸಮಾಜ ಒಗ್ಗಟ್ಟಾಗಿ ‘ಫರಂಗಿಪೇಟೆ ಛಲೋ’ಗೆ ಕರೆ ನೀಡುವುದಾಗಿ ಪೊಲೀಸ್ ಇಲಾಖೆಗೆ ಹಿಂದೂ ಜಾಗರಣ ವೇದಿಕೆ ಎಚ್ಚರಿಸಿದೆ.

 

 ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಮುಖರು, ವಿವಿಧ ಸಂಘಟನೆಯ ನಾಯಕರು, ಹಿಂದೂ ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.