ಪಾಸ್‌ಪೋರ್ಟ್ ಮಾಡಿಸಲು ಇನ್ಮುಂದೆ ಇದು ಬೇಕೇ ಬೇಕು...!! ನಿಯಮದಲ್ಲಿ ಮಹತ್ವದ ಬದಲಾವಣೆ...!!

  • 03 Mar 2025 11:45:43 AM

ಕೆಲವೊಂದು ಅಗತ್ಯ ಅಧಿಕೃತ ದಾಖಲೆಗಳನ್ನು ಮಾಡಿಸಿಕೊಳ್ಳಲು ನಾವು ಅನೇಕ ಕಚೇರಿ, ಇಲಾಖೆಗಳಿಗೆ ಒಂದೊಂದೇ ದಾಖಲೆಗಳ ಸಮೇತ ಓಡಾಡಬೇಕಾಗುತ್ತದೆ. ಅದು ಆಗಿ ನಮ್ಮ ಕೈ ಸೇರಲು ಹಲವು ಸಮಯ ತೆಗೆದುಕೊಳ್ಳುತ್ತದೆ. ಇದೀಗ ಪಾಸ್‌ಪೋರ್ಟ್ ನಿಯಮಗಳಲ್ಲಿ ಒಂದು ಮಹತ್ತರವಾದ ಬದಲಾವಣೆಯಾಗಿದೆ. ಅದೇನಂತೀರಾ....ಈ ಮಾಹಿತಿ ಓದಿ...

 

ಪಾಸ್‌ಪೋರ್ಟ್ ಗೆ ಅರ್ಜಿ ಸಲ್ಲಿಸುವಾಗ ಬರ್ತ್ ಸರ್ಟಿಫಿಕೇಟ್ ಕಡ್ಡಾಯ...!

 

ಭಾರತ ಸರ್ಕಾರ ಪಾಸ್‌ಪೋರ್ಟ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ. ಇನ್ಮುಂದೆ 2023ರ ಅಕ್ಟೋಬರ್ 1ರಂದು ಅಥವಾ ನಂತರ ಹುಟ್ಟಿದ ಭಾರತೀಯ ಪ್ರಜೆಗಳು ಪಾಸ್‌ಪೋರ್ಟ್ ಗೆ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಜನನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಈ ಹಿನ್ನೆಲೆ ಅಧಿಕೃತ ಸೂಚನೆಯನ್ನು ಹೊರಡಿಸಿದ್ದು ಈ ಹೊಸ ರೂಲ್ಸ್ ೧೯೮೦ರ ಪಾಸ್‌ಪೋರ್ಟ್ ನಿಯಮಗಳಿಗೆ ತಿದ್ದುಪಡಿ ಆಗಿದೆ.

 

ಹೊಸ ನಿಯಮ ಈ ಬಗ್ಗೆ ಏನು ಹೇಳುತ್ತದೆ...?

 

ಜನನ ಮತ್ತು ಮರಣ ನೋಂದಣಿ ಕಾಯಿದೆಯಡಿಯಲ್ಲಿ ಅಧಿಕಾರ ಹೊಂದಿರುವ ಯಾವುದೇ ಪ್ರಾಧಿಕಾರದಿಂದ ನೀಡಲಾದ ಜನನ ಪ್ರಮಾಣಪತ್ರವನ್ನು ಮಾತ್ರ ಜನ್ಮ ದಿನಾಂಕದ ಪುರಾವೆಯಾಗಿ ಪರಿಗಣಿಸಲಾಗುತ್ತದೆ ಎಂದು ಹೊಸ ನಿಯಮ ಸ್ಪಷ್ಟಪಡಿಸುತ್ತದೆ. ಈ ನಿಯಮವು ಪಾರದರ್ಶಕತೆ ಮತ್ತು ದಕ್ಷತೆಯನ್ನು ತರಲು ಸಹಾಯ ಮಾಡುತ್ತದೆ ಎಂದು ಸರ್ಕಾರ ಸ್ಪಷ್ಟೀಕರಣ ನೀಡಿದೆ.