ಮುಂದುವರೆದ ಕಾಂಗ್ರೇಸ್ ಗೂಂಡಾಗಿರಿ!;ಅಮಾಯಕನ‌ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ನಲಪಾಡ್ ಆಪ್ತ!

  • 03 Mar 2025 03:57:08 PM

ಯೂತ್ ಕಾಂಗ್ರೆಸ್ ಅಧ್ಯಕ್ಷನಾದ ನಲಪಾಡ್ ಅವರು ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳಿಂದ ಅಥವಾ ಯಾವುದಾದರೂ ಕೃತ್ಯಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇವರನ್ನು ಬಿಜೆಪಿಗರು ಆಗಾಗ ತರಾಟೆಗೆ ತೆಗೆದುಕೊಳ್ಳುತ್ತಿರುತ್ತಾರೆ. ಇದೀಗ ಇವರ ಆಪ್ತ ಎನ್ನಲಾದ ಒಬ್ಬಾತ ಓರ್ವ ಯುವಕನ ಮೇಲೆ ಹಲ್ಲೆ ಮಾಡಿದ್ದಾನೆ. 

 

ಯುವಕನ ಮೇಲೆ ಹಲ್ಲೆ ಮಾಡಿದ ನಲಪಾಡ್ ಆಪ್ತ ಮತ್ತು ಆತನ ಗ್ಯಾಂಗ್...!! 

 

ನಲಪಾಡ್ ನ ಆಪ್ತ ಎನ್ನಲಾಗಿರುವ ಒಬ್ಬಾತ ಮತ್ತು ಆತನ ತಂಡ ಸೇರಿ ಓರ್ವ ಯುವಕನ ಮೇಲೆ ಅಮಾನುಷವಾಗಿ ಹಲ್ಲೆಗೈದಿದ್ದು ಈ ಗುಂಪಿನ ನಾಯಕರಾದ ಅಬ್ಬಾಸ್ ಮತ್ತು ಆತನ ಸಹಚರರು ಯುವಕನಿಗೆ ಕಬ್ಬಿಣದ ಪೈಪ್ ನಿಂದ ಕ್ರೂರವಾಗಿ ಥಳಿಸಿದ್ದಾರೆ. ಬೆಂಗಳೂರಿನ ಮನೆಯೊಂದರ ಕೆಳಮಹಡಿಯ ಕಾರು ಪಾರ್ಕಿಂಗ್ ನಲ್ಲಿ ಈ ಹಲ್ಲೆ ಘಟನೆ ನಡೆದಿದೆ. ಅಬ್ಬಾಸ್ ನನ್ನು ನಲಪಾಡ್ ನ ಆಪ್ತ ಎಂದು ಗುರುತಿಸಲಾಗಿದೆ. ಅಬ್ಬಾಸ್, ಸುಲ್ತಾನ್ ಮತ್ತು ಉಳಿದ ನಾಲ್ವರಿಂದ ಈ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ. 

 

ಯುವಕರನ್ನು ಬೆತ್ತಲೆಗೊಳಿಸಿ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಕೆ...! ಹಣಕ್ಕೆ ಡಿಮ್ಯಾಂಡ್...!!

 

ನಲಪಾಡ್ ನ ಸಹಚರರಿಂದ ಆಗುತ್ತಿರುವ ದುಷ್ಕೃತ್ಯಗಳು ಒಂದೆರಡಲ್ಲ. ಮುಗ್ಧ ಹುಡುಗರ ಮೇಲೆ ದರ್ಪ ತೋರಿಸಿ ಅಮಾನುಷವಾಗಿ ಹಲ್ಲೆ ನಡೆಸಿ ಇವರು ವಿಕೃತಿ ಮೆರೆಯುತ್ತಿದ್ದರು. ಯುವಕನೋರ್ವ ಕಾಲು ಹಿಡಿದು ಬೇಡಿಕೊಂಡರೂ ಬಿಡದೆ ಕೈ, ಕಾಲು, ತಲೆ ಎಂದು ಎಲ್ಲೆಂದರಲ್ಲಿ ಹೊಡೆದು ಥಳಿಸಿದ್ದಾರೆ. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

 

ಕಾನೂನಿನ ಭಯವೇ ಇಲ್ಲದಂತೆ ವರ್ತಿಸುತ್ತಿರುವ ಈ ಪಾಪಿಗಳು ಇತ್ತೀಚೆಗೆ ಕಾಲೇಜು ಹುಡುಗನೋರ್ವನನ್ನು ಕೂಡಾ ಕಿಡ್ನ್ಯಾಪ್ ಮಾಡಿದ್ದರು. ಹಣ ನೀಡದಿದ್ದಾಗ ಬೆತ್ತಲೆಗೊಳಿಸಿ ಹಲ್ಲೆ ಮಾಡಿ ನಂತರ ಡಿಮ್ಯಾಂಡ್ ಮಾಡಿದಷ್ಟು ಹಣ ನೀಡದಿದ್ದರೆ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡುತ್ತಿದ್ದರು‌. ಇದೀಗ ಅವರ ಮೇಲೆ ಎಫ್ಐಆರ್ ದಾಖಲಾಗಿದೆ.