ರಾಹುಲ್ ಗಾಂಧಿ ಜೊತೆ ಕಾಣಿಸಿಕೊಂಡಿದ್ದ `ಕೈ' ಕಾರ್ಯಕರ್ತೆಯ ಶವ ಸೂಟ್ ಕೇಸ್ ನಲ್ಲಿ ಪತ್ತೆ....!!

  • 03 Mar 2025 05:35:10 PM

ಹರಿಯಾಣ: ಇತ್ತೀಚಿನ ದಿನಗಳಲ್ಲಿ ಹೆಣ್ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ಶೋಷಣೆ ಮತ್ತು ಕ್ರೂರವಾಗಿ ಹತ್ಯೆಗೈಯ್ಯುತ್ತಿರುವ ಘಟನೆ ಭಾರತದಲ್ಲಿ ಅತೀ ಹೆಚ್ಚಾಗಿ ನಡೆಯುತ್ತಿದೆ. ಇದಕ್ಕೆ ಬಿಜೆಪಿ- ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತರೂ ಕೂಡಾ ಹೊರತಾಗಿಲ್ಲ. ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಜೊತೆ ಭಾರತ್ ಜೋಡೋ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದ ಓರ್ವ ಮಹಿಳೆ ಶವ ಸೂಟ್ಕೇಸ್ ನಲ್ಲಿ ಪತ್ತೆಯಾಗಿದೆ. 

 

ಸೂಟ್ಕೇಸ್ ನಲ್ಲಿ ಪತ್ತೆಯಾಯ್ತು ಕಾಂಗ್ರೆಸ್ ಕಾರ್ಯಕರ್ತೆಯ ಶವ..!!

 

ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ʻಭಾರತ್‌ ಜೋಡೋʼ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತೆಯೋರ್ವಳ ಶವ ಹರಿಯಾಣದ ರೋಹ್ಟಕ್‌ ಜಿಲ್ಲೆಯ ಬಸ್‌ ನಿಲ್ದಾಣದ ಬಳಿ ಪತ್ತೆಯಾಗಿದೆ. ಹಿಮಾನಿ ನರ್ವಾಲ್‌ (22) ಮೃತ ದುರ್ದೈವಿ. ಬಸ್‌ ನಿಲ್ದಾಣದ ಬಳಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾವಿನ ಕುರಿತು ಉನ್ನತಮಟ್ಟದ ತನಿಖೆಗೆ ಕಾಂಗ್ರೆಸ್‌ ಆಗ್ರಹಿಸಿದೆ. 

 

ಕೊಲೆ ಮಾಡಿರುವ ಶಂಕೆ..! ಕುತ್ತಿಗೆ ಭಾಗದಲ್ಲಿ ಗಾಯದ ಗುರುತು ಪತ್ತೆ..!

 

ಸಂಪ್ಲಾ ಬಸ್‌ ನಿಲ್ದಾಣದ ಬಳಿ ದಾರಿಹೋಕರು ಸಂಶಯಾಸ್ಪದ ರೀತಿಯಲ್ಲಿ ಸೂಟ್‌ಕೇಸ್‌ ಇರುವುದನ್ನು ಗಮನಿಸಿದ್ದು ಈ ಬಗ್ಗೆ ಅನುಮಾನ ವ್ಯಕದತಪಡಿಸಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಧಿವಿಜ್ಞಾನ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಸೂಟ್‌ಕೇಸ್‌ನಲ್ಲಿ ಶವ ಇರುವುದನ್ನು ಪತ್ತೆಹಚ್ಚಿದ್ದಾರೆ. ಶವವನ್ನು ಹೊರತೆಗೆದಾಗ ಕುತ್ತಿಗೆ ಭಾಗಕ್ಕೆ ದುಪ್ಪಟ್ಟ ಬಿಗಿಯಲಾಗಿತ್ತು.

 

ಹೀಗಾಗಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಆಕೆಯ ಶವವನ್ನ ಮರಣೋತ್ತರ ಪರೀಕ್ಷೆಗಾಗಿ ರೋಹ್ಟಕ್ ಪಿಜಿಐಎಂಎಸ್‌ಗೆ ರವಾನಿಸಲಾಗಿದೆ. ಸದ್ಯ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕರು, ಎಸ್‌ಐಟಿ ತನಿಖೆಗೆ ಆಗ್ರಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.