ಬೆಳ್ತಂಗಡಿ:ಇತ್ತೀಚಿನ ದಿನಗಳಲ್ಲಿ ಅನೇಕರು ಮನೋ ದೌರ್ಬಲ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಯಾವುದೋ ಸಮಸ್ಯೆಯನ್ನು ಎದುರಿಸಲಾಗದೆ ಮಾನಸಿಕ ಸ್ಥೈರ್ಯ ಕಳೆದುಕೊಂಡು ಜೀವನವನ್ನೇ ಅಂತ್ಯವಾಗಿಸುವ ಸಾಹಸಕ್ಕೆ ಕೈ ಹಾಕ್ತಾರೆ. ಇದೀಗ ಬೆಳ್ತಂಗಡಿಯಲ್ಲೂ ಅಂತಹುದೇ ಅಪರೂಪದ ಘಟನೆಯೊಂದು ನಡೆದಿದೆ.
ಸಂಬಂಧಿಕರ ಮನೆಯಲ್ಲಿ ನೇಣಿಗೆ ಶರಣಾದ ನವವಿವಾಹಿತೆ...!!
ಹೌದು. ಬೆಳ್ತಂಗಡಿಯ ಕಾಣಿಯೂರು ನಿವಾಸಿ, ನವ ವಿವಾಹಿತೆ ಸಂಬಂಧಿಕರೋರ್ವರ ಮನೆಯಲ್ಲಿ ನೇಣು ಬಿಗಿದು ಜೀವಾಂತ್ಯಗೊಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪಡಂಗಡಿ ಗ್ರಾಮದ ಬದ್ಯಾರು ಬರಾಯ ಮನೆ ನಿವಾಸಿ, ಪ್ರಕಾಶ್ ಎಂಬಾತನ ಪತ್ನಿ ಇಪ್ಪತ್ತಮೂರು ವರ್ಷದ ಪೂಜಾಶ್ರೀ ಆತ್ಮಹತ್ಯೆಗೆ ಶರಣಾದ ಯುವತಿ. ಇವರು ಹತ್ತು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಪೂಜಾಶ್ರೀ ಅವರು ಮಾನಸಿಕವಾಗಿ ನೊಂದಿದ್ದರು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿದುಬಂದಿದೆ.
ಕೆಲಸಕ್ಕಾಗಿ ಹುಡುಕಾಡುತ್ತಿದ್ದ ಪೂಜಾಶ್ರೀ...!!
ವಿದ್ಯಾವಂತೆಯಾಗಿದ್ದ ಪೂಜಾಶ್ರೀ ಅವರು ಮದುವೆಯ ನಂತರ ಉದ್ಯೋಗ ಹುಡುಕುತ್ತಿದ್ದರು. ಆದರೆ ಅವರಿಗೆ ಬೇಕಾದ ರೀತಿಯಲ್ಲಿ ಕೆಲಸ ಸಿಗದೇ ಇದ್ದಾಗ ಕೆಲಸ ಹುಡುಕಲು ಪತಿ ಪ್ರಕಾಶ್ ಅವರು ಬೆಂಗಳೂರಿನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಪೂಜಾ ಅವರನ್ನು ಕಳುಹಿಸಿದ್ದರು.
ಆದರೆ ಅಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಪ್ರಕಾಶ್ ಅವರು ಬದ್ಯಾರು ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದರು. ಕೆಲಸವಿಲ್ಲದೆ ಮಾನಸಿಕ ಹಿಂಸೆ ಅನುಭವಿಸುತ್ತಿದ್ದ ಕಾರಣಕ್ಕೆ ಪೂಜಾಶ್ರೀ ಈ ದುಡುಕಿನ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.