ಕಾವೇರಿ 2.೦ ತಂತ್ರಾಂಶದ ಅವ್ಯವಸ್ಥೆಗೆ ಯಾರು ಹೊಣೆ ಹೇಳುವವರಿಲ್ಲ ಕೇಳುವವರಿಲ್ಲ ಸಾರ್ವಜನಿಕರ ಪರದಾಟ
ಇತ್ತೀಚಿನ ದಿನಗಳಲ್ಲಿ ಕಾವೇರಿ ತಂತ್ರಾಂಶದ ಸರ್ವರ್ ದಸ್ತಾವೇಜು ಅಪ್ಲೋಡ್ ಮಾಡುವವರ ಜೊತೆಗೆ ಹಾವು ಏಣಿ ಆಟವಾಡುತ್ತಿರುವಂತೆ ಕಾಣುತ್ತಿದೆ ಸರಿಯಾಗಿ ಲಾಗಿನ್ ಆಗಬೇಕಾದರೆ ಅರ್ಧ ಗಂಟೆಗಳ ಕಾಯುವ ಪರಿಸ್ಥಿತಿ
ಕಷ್ಟಪಟ್ಟು ಲಾಗಿನ್ ಆದರೂ ಕೂಡ ಅಪ್ಲೋಡ್ ಮಾಡಲು ಸಮಸ್ಯೆ
ಹೌದು ಅಂತೂ ಇಂತೂ ಕಷ್ಟ ಪಟ್ಟು ಲಾಗಿನ್ ಆದಲ್ಲಿ ದಸ್ತಾವೇಜು ಅಪ್ಲೋಡ್ ಮಾಡಲು ಹರ ಸಾಹಸ ಪಡಬೇಕಾದ ಪರಿಸ್ಥಿತಿ ಒಂದು ದಾಖಲೆ ಅಪ್ಲೋಡ್ ಮಾಡಲು ಹೊರಟು ಕಷ್ಟಪಟ್ಟು ಅಪ್ಲೋಡ್ ಆದಲ್ಲಿ ಯಾವುದೋ ಯುದ್ದವನ್ನು ಗೆದ್ದು ಬಂದ ಹಾಗೆ ಅನುಭವ ಅಷ್ಟೊಂದು ಕಷ್ಟಕರವಾಗಿದೆ ಈ ಸರ್ವರ್ ಸಮಸ್ಯೆ
ಅಪ್ಲೋಡ್ ಆದಲ್ಲಿ ಪೇಮೆಂಟ್ ಮಾಡಲು ಕೂಡ ಈ ಸರ್ವರ್ ಸಮಸ್ಯೆ
ಕಷ್ಟಪಟ್ಟು ದಾಖಲೆ ಅಪ್ಲೋಡ್ ಆದ ಬಳಿಕ ಪೇಮೆಂಟ್ ಗೆ ಬಂದಲ್ಲಿ ಸರ್ವರ್ ಸಮಸ್ಯೆ ಮತ್ತೆ ಬರುತ್ತದೆ ಪೇಮೆಂಟ್ ಸರಿಯಾಗಿ ಆಗದೇ ಇದ್ದಲ್ಲಿ ಗಂಟೆ ಗಟ್ಟಲೆ ಕಾಯುವ ಪರಿಸ್ಥಿತಿ ವೆರಿಫೈ ಚಲನ್ ಎನ್ನುವ ಸಮಸ್ಯೆ
ಸರಕಾರಕ್ಕೆ ಅತೀ ಹೆಚ್ಚು ಲಾಭ ನೀಡುವ ಈ ಕಾವೇರಿ ತಂತ್ರಾಂಶ ಈ ರೀತಿ ಆದಲ್ಲಿ ಇನ್ನುಳಿದ ತಂತ್ರಾಂಶದ ಗತಿ ಏನು ತೆರಿಗೆ ಹೆಚ್ಚಿಸಿ ಜನರ ದುಡ್ಡು ಲೂಟಿ ಹೊಡೆಯುವ ಸರಕಾರಕಾರಕ್ಕೆ ಸರಿಯಾದ ಸರ್ವರ್ ನೀಡಲೂ ಸಾಧ್ಯವಾಗುತ್ತಿಲ್ಲ ಎಂದು ಜನರು ಹಿಡಿ ಶಾಪ ಹಾಕುತ್ತಿದ್ದಾರೆ