ಪುತ್ತೂರ್: ಉದ್ಯೋಗ ಅನ್ನುವಂತದ್ದು ಮನುಷ್ಯನಿಗೆ ಸುಸ್ಥಿತಿಯಲ್ಲಿ ಜೀವನ ಸಾಗಿಸಲು ಇರಬೇಕಾದ ಮುಖ್ಯವಾದ ಅಂಶ. ಶಿಕ್ಷಣ ಪಡೆದಿದ್ದರೂ ಕೂಡಾ ಉದ್ಯೋಗಕ್ಕಾಗಿ ಅದೆಷ್ಟೋ ಪದವೀಧರರು ಇಂದಿಗೂ ಅಲೆದಾಡುತ್ತಿದ್ದಾರೆ. ಬೇರೆ ಊರಲ್ಲಿ ಕೆಲಸವಿದ್ದರೂ ಹುಟ್ಟೂರಿನ ಮಣ್ಣು, ವಾತಾವರಣ, ಆಹಾರಕ್ಕೆ ಒಗ್ಗಿಹೋದ ಜೀವನಕ್ಕೆ ಬೇರೆ ಊರು ಅಷ್ಟು ಸುಲಭವಾಗಿ ಹಿಡಿಸದು. ಇದೀಗ ಅಂತವರಿಗಾಗಿಯೊಂದು ಶುಭಸುದ್ದಿ...
ಜೇನು ಸಂಸ್ಕರಣಾ ಘಟಕದಲ್ಲಿದೆ ಉದ್ಯೋಗವಕಾಶ...!!
ಗ್ರಾಮಜನ್ಯ ರೈತ ಉತ್ಪಾದಕ ಕಂಪೆನಿಯು ರಾಷ್ಟ್ರೀಯ ಜೇನು ಮಂಡಳಿಯ ವತಿಯಿಂದ ಜೇನು ಕೃಷಿಯ ಅಧಿಕೃತ ಮಾನ್ಯತೆ ಪಡೆದ ದಕ್ಷಿಣ ಭಾರತದ ಪ್ರಪ್ರಥಮ ಸಂಸ್ಥೆಯಾಗಿದೆ. ಪುತ್ತೂರಿನಲ್ಲಿ ದಕ್ಷಿಣ ಭಾರತದ ಅತೀ ದೊಡ್ಡ ಜೇನು ಸಂಸ್ಕರಣಾ ಘಟಕ ಸ್ಥಾಪಿಸುತ್ತಿದ್ದು ಈ ಸಂಸ್ಥೆಗೆ ದ.ಕ ಜಿಲ್ಲೆಯಾದ್ಯಂತ ಕೃಷಿ ಅಭಿವೃದ್ಧಿ ನಿರ್ವಾಹಕರು ಬೇಕಾಗಿದ್ದಾರೆ. ಕೇಂದ್ರದ ಮಹಿಳಾ ಅಭಿವೃದ್ಧಿ ಯೋಜನೆಯಲ್ಲಿ ಕೇವಲ 250 ಹುದ್ದೆಗಳು ಮಂಜೂರಾಗಿದ್ದು ತಿಂಗಳಿಗೆ 25000 ಗಳಿಸುವ ಸುವರ್ಣ ಅವಕಾಶವಿದೆ.
ಮಾ.10ರಂದು ನೇರ ಸಂದರ್ಶನ...!
ಮಾ.10ಕ್ಕೆ ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ನೇರ ಸಂದರ್ಶನವಿರುತ್ತದೆ. ಸಂದರ್ಶನಕ್ಕಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಗ್ರಾಮಜನ್ಯ ಫಾರ್ಮರ್ಸ್ ಆ್ಯಂಡ್ ಪ್ರೊಡ್ಯೂಸರ್ ಕಂಪೆನಿ ಲಿಮಿಟೆಡ್ ಹೆಸರಿನಲ್ಲಿ ರೂ.250ರ ಡಿಮ್ಯಾಂಡ್ ಡ್ರಾಫ್ಟ್ ಮತ್ತು ರೆಸ್ಯೂಮ್ ಜೊತೆಗೆ ಕಾರ್ಪೋರೇಟ್ ಕಚೇರಿ, ರೋಟರಿ ಬ್ಲಡ್ ಬ್ಯಾಂಕ್ ಬಳಿ, ರಾಧಾಕೃಷ್ಣ ಬಿಲ್ಡಿಂಗ್ ಪುತ್ತೂರು ದ.ಕ-574202ಈ ವಿಳಾಸಕ್ಕೆ ಖುದ್ದಾಗಿ ಹಾಜರಾಗಲು ಕೋರಲಾಗಿದೆ. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಗ್ರಾಮಜನ್ಯ ರೈತ ಉತ್ಪಾದಕ ಕಂಪೆನಿ 91825145042 ಈ ನಂಬರನ್ನು ಸಂಪರ್ಕಿಸಬಹುದು.