ಭಾರತದಲ್ಲಿ ದೇವರನ್ನು ನಂಬುವಂತೆ ಜ್ಯೋತಿಷ್ಯಶಾಸ್ತ್ರವನ್ನೂ ನಂಬುವ ಜನರಿದ್ದಾರೆ. ಅನೇಕರು ತಮ್ಮ ಕಷ್ಟ ಕಾರ್ಪಣ್ಯಗಳನ್ನು ನೀಗಿಸಿಕೊಳ್ಳಲು, ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಜ್ಯೋತಿಷ್ಯರ ಬಳಿ ಹೋಗುತ್ತಾರೆ. ಕೆಲಮೊಮ್ಮೆ ಅವರು ನುಡಿವ ಭವಿಷ್ಯವೂ ನಿಜವಾಗುವುದುಂಟು. ಇದೀಗ ಕೋಡಿಮಠದ ಸ್ವಾಮೀಜಿ ರಾಜಕೀಯ ವಿಚಾರದಲ್ಲಿ ಸ್ಫೋಟಕ ಭವಿಷ್ಯವನ್ನು ನುಡಿದಿದ್ದಾರೆ.
ಯುಗಾದಿ ಹಬ್ಬದ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಸುನಾಮಿ ಏಳುವ ಲಕ್ಷಣ....!!
ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಆಗಾಗ ರಾಜಕೀಯ ಮುಖಂಡರ ಬಗ್ಗೆ, ಸೆಲೆಬ್ರೆಟಿಗಳ ಬಗ್ಗೆ ಮತ್ತು ಭೂಮಿಯ ಬಗ್ಗೆ ಅಚ್ಚರಿ ಭವಿಷ್ಯ ಹೇಳುತ್ತಿರುತ್ತಾರೆ. ಇವರು ನುಡಿವ ಭವಿಷ್ಯ ನಿಜವಾಗುವುದೂ ಉಂಟು. ಅನೇಕರು ಇವರ ಜ್ಯೋತಿಷ್ಯಶಾಸ್ತ್ರವನ್ನು ನಂಬುತ್ತಾರೆ. ಇದೀಗ ಅವರು ಯುಗಾದಿ ಹಬ್ಬದ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಸುನಾಮಿ ಏಳುವ ಲಕ್ಷಣಗಳು ಎದ್ದು ಕಾಣುತ್ತಿದೆ.
ಶೀಘ್ರದಲ್ಲಿಯೇ ಈ ಕುರಿತಂತೆ ಸುಳಿವು ಸಿಗಲಿದೆ ಎಂದಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯರಾಜಕಾರಣದ ಬಗ್ಗೆಯೂ ಮಾತನಾಡಿ ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದವರು ಹಕ್ಕಬುಕ್ಕರು. ಆ ಸಮಾಜಕ್ಕೆ ಅಧಿಕಾರ ಬಂದರೆ ಸುಲಭವಾಗಿ ಕಿತ್ತುಕೊಳ್ಳಲು ಸಾಧ್ಯವಾಗೋದಿಲ್ಲ. ಸಮಾಜದಲ್ಲಿ, ರಾಜ್ಯದಲ್ಲಿ ಒಳ್ಳೆ ಕೆಲಸ ಮಾಡೋರಿಗೆ ಕೆಡುಕಾಗೋದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ನಡೆಯಲಿದೆ ಕದನ...!
ಈಗಾಗಲೇ ರಾಜ್ಯದಲ್ಲಿ ಸಿದ್ಧರಾಮಯ್ಯ ಅವರು ಸಿಎಂ ಸ್ಥಾನದಲ್ಲಿದ್ದಾರೆ. ಈ ಕುರ್ಚಿಗಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಕೂಡಾ ಆಕಾಂಕ್ಷಿ. ಅವರಿಬ್ಬರ ಮಧ್ಯೆ ಈ ಸ್ಥಾನಕ್ಕಾಗಿ ಕಿತ್ತಾಟ ನಡೆಯೋದು ಕಾಮನ್. ಆದರೆ ಈ ಮೊದಲು ನಾನು ಸಿದ್ಧರಾಮಯ್ಯ ಐದು ವರ್ಷ ಆಡಳಿತ ನಿರ್ವಹಿಸುತ್ತಾರೆ ಎಂದು ಹೇಳಿದ್ದೆ. ಅದು ನಿಜವಾಗಿದೆ. ಆದರೆ ಮುಂದಿನ ಅವರ ರಾಜಕೀಯ ಭವಿಷ್ಯ ಹೇಗಿದೆ ಎಂದು ಯುಗಾದಿಯ ನಂತರ ಹೇಳಲು ಸಾಧ್ಯ ಎಂದಿದ್ದಾರೆ.