ಮೆಡ್ಚಲ್: ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ದಾಂಪತ್ಯ ಜೀವನವಂತೂ ಹಳಸಿ ಹೋಗುತ್ತಿದೆ. ನಂಬಿಕೆ, ಪ್ರಾಮಾಣಿಕತೆಗೆ ಬೆಲೆಯೇ ಇಲ್ಲದಂತಾಗಿದೆ. ಸಂಬಂಧಗಳು ವ್ಯವಹಾರವಾಗಿ ಬಿಟ್ಟಿದೆ. ಅಕ್ರಮ ಸಂಬಂಧಗಳೂ ಹೆಚ್ಚಾಗುತ್ತಿದೆ. ಇದರಿಂದ ಕೊಲೆ ಪ್ರಕರಣಗಳು ಕೂಡಾ ಅಧಿಕ ಪ್ರಮಾಣದಲ್ಲಿ ನಡೆಯುತ್ತಿದೆ. ಇಲ್ಲೊಂದು ನಡೆದ ವಿಚಿತ್ರ ಘಟನೆಯ ಸ್ಟೋರಿ ಕೇಳಿದ್ರೆ ನೀವೂ ದಂಗಾಗೋದು ಗ್ಯಾರಂಟಿ....
22ರ ಯುವಕನ ಜೊತೆ ಪರಾರಿ ಆದ ವಿವಾಹಿತ ಮಹಿಳೆ..!!
ಮೂವತ್ತೈದು ವರ್ಷದ ವಿವಾಹಿತ ಮಹಿಳೆಯೋರ್ವಳು ತನ್ನ ಗಂಡ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಇಪ್ಪತ್ತೆರಡು ವರ್ಷದ ಯುವಕನ ಜೊತೆ ಪರಾರಿಯಾದ ಘಟನೆ ಮೆಡ್ಚಲ್ ಜಿಲ್ಲೆಯಲ್ಲಿ ನಡೆದಿದೆ. ಸುಕನ್ಯಾ ಎಸ್ಕೇಪ್ ಆದ ಮಹಿಳೆಯಾಗಿದ್ದಾಳೆ. ಈಕೆ ಸೋಷಿಯಲ್ ಮೀಡಿಯಾದಲ್ಲಿ ಗೋಪಿ ಎಂಬ ಯುವಕನ ಜೊತೆ ಪರಿಚಯ ಮಾಡಿಕೊಂಡಿದ್ದಳು. ಆರಂಭದಲ್ಲಿ ಕೇವಲ ಪರಿಚಯದಲ್ಲಿದ್ದ ಸ್ನೇಹ ನಂತರ ಪ್ರೀತಿಗೆ ತಿರುಗಿದೆ. ಕ್ರಮೇಣ ಇವರ ಆಪ್ತತೆ ಇನ್ನಷ್ಟು ಹತ್ತಿರವಾಗಿದ್ದು ಒಟ್ಟಿಗೆ ಜೀವನ ನಡೆಸಲು ಕೂಡಾ ನಿರ್ಧರಿಸಿದ್ದಾರೆ. ಇತ್ತ ಕಡೆ ಪತ್ನಿ ಪರಾರಿಯಾಗಿರುವ ಬಗ್ಗೆ ಸುಕನ್ಯಾ ಗಂಡ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಪೊಲೀಸರನ್ನು ನೋಡಿ ಬೈಕ್ ದಾರಿ ಮಧ್ಯೆ ಬಿಟ್ಟು ಜೋಡಿ ಎಸ್ಕೇಪ್...!!
ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆಗ ಸಸುಕನ್ಯಾ ಗೋಪಿಯೊಂದಿಗೆ ಬೈಕ್ ನಲ್ಲಿ ಹೋಗುತ್ತಿರೋದು ಕಂಡುಬಂದಿದೆ. ಕೂಡಲೇ ಆಕ್ಟೀವ್ ಆದ ಪೊಲೀಸರು ಇವರು ಇದ್ದ ಜಾಗವನ್ನು ಕೊನೆಗೂ ಪತ್ತೆಹಚ್ಚಿದ್ದಾರೆ. ಆಗ ಪೊಲೀಸರನ್ನು ಕಂಡು ಗಾಬರಿಯಾದ ಅವರು ಬೈಕ್ ನ್ನು ಅರ್ಧ ದಾರಿಯಲ್ಲೇ ಬಿಟ್ಟು ಬಸ್ಸಿನಲ್ಲಿ ಎಸ್ಕೇಪ್ ಆಗಿದ್ದಾರೆ. ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರೆಯುತ್ತಿದೆ.