ನೀರಿಲ್ಲದ ನಾಡಿನಲ್ಲಿ ದೈವಪವಾಡ! ಬಾಡೂರು ಸಂಟನಡ್ಕ ದೈವಸ್ಥಾನದಲ್ಲಿ ಕೊಳವೆ ಬಾವಿಯಿಂದ ಉಕ್ಕಿದ ಜಲಧಾರೆ!

  • 04 Mar 2025 09:30:39 PM

ಬಾಡೂರು: ನೀರಿಗಾಗಿ ತಾತ್ವರ ಎದುರಿಸುವ ನಾಡಿನ ದೈವ ಕ್ಷೇತ್ರವೊಂದರಲ್ಲಿ ತೆಗೆದ ಕೊಳವೆ ಬಾವಿಯಲ್ಲಿ ನೀರು ಉಕ್ಕಿ ಹರಿದ ಘಟನೆ ಬಾಡೂರು ಗ್ರಾಮದ ಸಂಟನಡ್ಕ ಶ್ರೀ ಜಟಾಧಾರಿ ಧೂಮವಾತಿ ಪರಿವಾರ ದೈವಸ್ಥಾನದಲ್ಲಿ ಸಂಭವಿಸಿದೆ. ಅಲ್ಲಿನ ಸ್ಥಳೀಯರು ಇದು ಅಚ್ಚರಿಯೇ ಸರಿ! ಇದು ಇಲ್ಲಿನ ದೈವ ದೇವರ ಪವಾಡ ಎಂದು ಹೇಳಿಕೊಳ್ಳುತ್ತಿದ್ದಾರೆ. 

 

ಈ ದೇವಸ್ಥಾನವು ಪುರಾತನ ಚರಿತ್ರೆ ಪಡೆದ ಪುಣ್ಯ ಕ್ಷೇತ್ರವಾಗಿದೆ. ಈ ದೇವ ಕ್ಷೇತ್ರವು ಜಾಯಿಲೆ ಬೈದೆದಿ ಎಂಬ ದೈವ ಸಂಬೋತೆ ಯಿಂದೆ ಸ್ಥಾಪಿಸಲ್ಪಟ್ಟ ಪುಣ್ಯ ಬಾಡೂರು ಗ್ರಾಮದ ಸಂಟನಡ್ಕ ಶ್ರೀ ಜಟಾಧಾರಿ ಧೂಮವಾತಿ ಪರಿವಾರದ್ದಾಗಿದೆ. ಈ ಕ್ಷೇತ್ರದ ಪುನರ್ ನಿರ್ಮಾಣ ದಿಂದ ಕೆಲವೊಂದು ಪವಾಡ ಸದೃಶಗಳು ನಡೆದು ಗ್ರಾಮದ ಜನರನ್ನು ಅಚ್ಚರಿ ಮೂಡಿಸಿದೆ. ಇಂತದೆ ಮತ್ತೊಂದು ಅಚ್ಚರಿ ಮೂಡಿಸುವ ಘಟನೆ ಕ್ಷೇತ್ರದಲ್ಲಿ ನಡೆದಿದೆ.ಅದೇನು ಗೊತ್ತೇ??

 

 

 ಸದ್ರಿ ಕ್ಷೇತ್ರ ದ ಪುನರ್ ಪ್ರತಿಷ್ಠೆ ಗೊಂಡು ಬರುವ ಎಪ್ರಿಲ್ ಗೆ ಹನ್ನೆರಡು ವರ್ಷ ಆಗುತ್ತದೆ. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಬ್ರಹ್ಮ ಕುಂಭಾಂಬಿಷೇಕ ಮತ್ತು ದೈವಗಳಿಗೆ ನೇಮೋತ್ಸವ ನಡೆಯುತ್ತದೆ. ಇಲ್ಲಿನ ಭಕ್ತರ ಕನಸಿನಂತೆ ಕ್ಷೇತ್ರಕ್ಕೆ ಕೊಳವೆ ಬಾವಿ ತೆಗೆಯ ಬೇಕೆಂದು ಒಂದು ಕೊಳವೆ ಬಾವಿ ತೆಗೆಯಲಾಯಿತು. ಆದರೆ ದುರಾದೃಷ್ಟ ನೀರು ಸಿಗದ ಕಾರಣ ಸಿಗಲಿಲ್ಲ .ಇನ್ನೊಂದು ಕೊಳವೆ ಬಾವಿ ಮಾಡುವ ಮೊದಲು ಜ್ಯೋತಿಷ್ಯದ ನಿರ್ದೇಶನದಂತೆ ಕುಕ್ಕಾಜೆ ಶ್ರೀ ಶ್ರೀ ಕೃಷ್ಣ ಗುರೂಜಿಯವರ ನೇತೃತ್ವದಲ್ಲಿ ಅತಿ ರುದ್ರ ಯಾಗ ಮಾಡಲಾಯಿತು. 

 

 

ಅದೇ ದಿನ ರಾತ್ರಿ ಇನ್ನೊಂದು ಕೊಳವೆ ಬಾವಿಯನ್ನು ತೆಗೆಯಲಾಯಿತು. ಅಚ್ಚರಿಯ ವಿಷಯ ಏನೆಂದರೆ ಕ್ಷೇತ್ರ ದ ದೈವಗಳ ಕಾರಣಿಕ ವೆಂಬಂತೆ ಅತೀ ಕಡಿಮೆ ಆಳದಲ್ಲಿ ನೀರು ಮೇಲಕ್ಕೆ ಚಿಮ್ಮಿ ಹರಿಯತೊಡಗಿತು. ಆ ಪ್ರದೇಶದಲ್ಲಿ ಎಲ್ಲಿಯೂ ನೀರು ಇಲ್ಲದ ಈ ಸಮಯದಲ್ಲಿ ಈ ರೀತಿಯಲ್ಲಿ ನೀರು ಹರಿದು ಹೋಗುವುದೆಂದರೆ ಅದು ಪವಾಡವೇ ಸರಿ. ಈ ಕ್ಷೇತ್ರ ದ ಕಾರಣಿಕ ಅಲ್ಲದೆ ಮತ್ತೊಂದು ಅಲ್ಲ ಎಂಬುದು ವಿಸ್ಮಯ ಮೂಡಿಸಿದ ಘಟನೆಯಾಗಿದೆ. ಈವಾಗ ಜನರು ಈ ಕ್ಷೇತ್ರದ ಕಾರಣೀಕತೆಯನ್ನು ವಿಸ್ಮಯವನ್ನು ವೀಕ್ಷಿಸುವುದಕ್ಕಾಗಿ ಬರುತ್ತಿದ್ದಾರೆ.