ಪುತ್ತೂರು :ಜೀವನ ಎಂದ ಮೇಲೆ ಒಂದಲ್ಲ ಒಂದು ರೀತಿಯ ಕಷ್ಟ ಕಾರ್ಪಣ್ಯಗಳು ಬರುತ್ತಲೇ ಇರುತ್ತದೆ. ಅದನ್ನು ಎದುರಿಸಿ ನಾವೂ ಸಾಗಬೇಕಾಗುತ್ತದೆ. ಕೆಲವೊಮ್ಮೆ ಉಸಿರುಗಟ್ಟಿಸುವ ಕಷ್ಟ, ಆರ್ಥಿಕ ಸಮಸ್ಯೆ ಬಂದಾಗ ಆತ್ಮವಿಶ್ವಾಸ ಕುಗ್ಗಿ ಹೋಗುತ್ತದೆ. ಮನಸ್ಸು ದುರ್ಬಲವಾಗುತ್ತದೆ. ಬದುಕುವ ಆಸೆಯನ್ನೂ ಕೊನೆಗೆ ಕಳೆದುಕೊಂಡು ಬಿಡುತ್ತೇವೆ. ಇಲ್ಲಿ ಆದದ್ದು ಅದೇ ನೋಡಿ...
ಮನೆಯ ಬಳಿಯಲ್ಲೇ ನೇಣಿಗೆ ಶರಣಾದ ಯುವಕ..!
ಆಟೋ ರಿಕ್ಷಾ ಚಾಲಕರೋರ್ವರು ಇದ್ದಕಿದ್ದಂತೆ ಮನೆಯ ಬಳಿಯಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನ ಪೆರಿಯತ್ತೋಡಿ ಎಂಬಲ್ಲಿ ನಡೆದಿದೆ. ಪೆರಿಯತ್ತೋಡಿ ನಿವಾಸಿ ನಲ್ವತ್ತು ವರ್ಷದ ಕೃಷ್ಣ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ. ಇವರು ಸಹೋದರರು ಮತ್ತು ಮೂವರು ಸಹೋದರಿಯರನ್ನು ಅಗಲಿದ್ದಾರೆ. ಕುಟುಂಬಸ್ಥರಲ್ಲಿ ಮನೆ ಮಗನನ್ನು ಕಳೆದುಕೊಂಡ ನೋವು ಮುಗಿಲು ಮುಟ್ಟಿದೆ. ಪುತ್ತೂರು ಆಟೋ ರಿಕ್ಷಾ ಚಾಲಕರು ಕೂಡಾ ಇವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲಗಾರರ ಕಿರುಕುಳಕ್ಕೆ ಬೇಸತ್ತು ಈ ಕೃತ್ಯ ಎಸಗಿದ ಬಗ್ಗೆ ಶಂಕೆ...!
ಎಂದಿನಂತೆ ಕೃಷ್ಣ ಅವರು ರಿಕ್ಷಾದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದರು. ಹಾಗೇ ಮಧ್ಯಾಹ್ನದ ವೇಳೆ ಅವರಿಗೆ ಸಾಲ ವಸೂಲಿಗಾರರ ಕಾಲ್ ಕೂಡಾ ಬಂದಿತ್ತು. ಇವರು ಸಾಲ ಬಾಧೆ ಸಮಸ್ಯೆಯನ್ನು ಎದುರಿಸುತ್ತಿದ್ದರು ಎಂದು ತಿಳಿದುಬಂದಿದೆ. ಸಾಲಗಾರರ ಫೋನ್ ಬಂದಾಗ ಏನೂ ಮಾಡಲು ತೋಚದಿದ್ದಾಗ ಮನೆಯ ಬಳಿಯಲ್ಲೇ ಇದ್ದ ಮರದ ಗೆಲ್ಲಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.