ಅಕ್ರಮವಾಗಿ ಹಣ ವರ್ಗಾವಣೆ...!!ಎಸ್ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಪೈಝಿ ಅರೆಸ್ಟ್....!!

  • 05 Mar 2025 12:50:34 PM

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಇತರ ಬುದ್ಧಿ ಜೀವಿಗಳ ಪಕ್ಷಗಳು ಹಗರಣಗಳಲ್ಲಿ ಸಿಲುಕಿಕೊಂಡು ಬಿಜೆಪಿಗರಿಂದ ಛೀ ಥೂ ಎನಿಸಿಕೊಳ್ಳುತ್ತಿದೆ. ಬಿಜೆಪಿಗೆ ಆಹಾರವಾಗಿ ಒಂದಲ್ಲ ಒಂದು ಅಕ್ರಮಗಳು ಬಯಲಾಗುತ್ತಲೇ ಇರುತ್ತದೆ. ಇದೀಗ ಎಸ್ಡಿಪಿಐ ರಾಷ್ಟ್ರೀಯ ಅಧ್ಯಕ್ಷನೋರ್ವನ ಬಂಧನ ಮಾಡಲಾಗಿದೆ.

 

ಅಕ್ರಮ ಹಣ ವರ್ಗಾವಣೆ, ಎಂ.ಕೆ ಪೈಝಿ ಅರೆಸ್ಟ್...!

 

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಾಮೀಲಾಗಿರುವ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಪಾಝೀ ಅವರನ್ನು ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ದಿಲ್ಲಿ ವಿಮಾನ ನಿಲ್ದಾಣದಲ್ಲೇ ಎಂ.ಕೆ ಪೈಝಿ ಅವರನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿಯಲ್ಲೇ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಫೆ.೨೮ರಂದು ಇ.ಡಿ ಅಧಿಕಾರಿಗಳು ಕೇರಳದಲ್ಲಿರುವ ಪೈಝಿ ಅವರ ಮನೆಯ ಮೇಲೆ ರೈಡ್ ಮಾಡಿದ್ದರು. 

 

ಐವತ್ತಾರು ಕೋಟಿ ಜಫ್ತಿ ಮಾಡಿದ ಇ.ಡಿ ಅಧಿಕಾರಿಗಳು...!! 

 

 ಕಳೆದ ವರ್ಷ ಕುವೈತ್, ಓಮನ್, ಕತರ್, ಸೌದಿ ಅರೇಬಿಯಾ ಮತ್ತು ಯುಎಇ ಸೇರಿದಂತೆ ಸಿಂಗಾಪುರ ಮತ್ತು ಗಲ್ಫ್ ದೇಶಗಳಲ್ಲಿ ಪಿಎಫ್ಐ ಸುಮಾರು ಹದಿಮೂರು ಸಾವಿರ ಸಕ್ರಿಯ ಸದಸ್ಯರನ್ನು ಹೊಂದಿದೆ ಎಂದು ಪರಿಶೀಲಿಸಿ ಜಾರಿ ನಿರ್ದೇಶನಾಲಯ ಗಂಭೀರ ಆರೋಪ ಮಾಡಿದೆ. ಇದರಲ್ಲಿರುವ ಸದಸ್ಯರು ವಿದೇಶಗಳಲ್ಲಿ ಹಣವನ್ನು ಸಂಗ್ರಹಿಸಿ ಅಕ್ರಮ ಹವಾಲಾ ಮಾರ್ಗಗಳ ಮೂಲಕ ಭಾರತಕ್ಕೆ ವರ್ಗಾಯಿಸುತ್ತಿದ್ದರು ಎಂದು ತಿಳಿದುಬಂದಿದೆ. ಈವರೆಗೆ ತನಿಖೆಯ ಭಾಗವಾಗಿ ಒಟ್ಟು ಐವತ್ತಾರು ಕೋಟಿಗೂ ಅಧಿಕ ಮೌಲ್ಯದ ಪಿಎಫ್ಐ ಆಸ್ತಿಯನ್ನು ಇ.ಡಿ ಜಫ್ತಿ ಮಾಡಿದೆ.