ವಿಟ್ಲಪೇಟೆಯ ಅಡ್ಡದ ಬೀದಿ ರಸ್ತೆ ಸಮೀಪದ ಬಾಕಿಮಾರ್ಗದ್ದೆಯಲ್ಲಿ ದಿನಾಂಕ 29.10.2024 ರಂದು ಸಂಜೆ ವಿಟ್ಲಪೇಟೆಯಲ್ಲಿರುವ ಬಸವ ಹೋರಿ ಒಂದು ಅನಾರೋಗ್ಯದಿಂದ ಬಿದ್ದಿತ್ತು.ಈ ಬಗ್ಗೆ ಗೊತ್ತಾದ ತಕ್ಷಣ ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ವೈದ್ಯರನ್ನು ಕರೆಯುವ ಮೂಲಕ ಚಿಕಿತ್ಸೆಯನ್ನು ನೀಡಲಾಯಿತು....
ಈ ಮಧ್ಯದಲ್ಲಿ ಅನ್ಯ ಸಮುದಾಯಕ್ಕೆ ಸೇರಿದ ಕೆಲವು ವ್ಯಕ್ತಿಗಳು ಆ ಹೋರಿ ನಮ್ಮದು ಎಂದು ಹೇಳಿಕೊಂಡು ಬಂದರು. ಇದರ ಬೆಳವಣಿಗೆ ಭಾಗವಾಗಿ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಅನ್ಯಮತಿಯ ವ್ಯಕ್ತಿಗಳ ಮಧ್ಯೆ ವಾಗ್ವಾದ ಆಯ್ತು .ತಕ್ಷಣ ಸ್ಥಳಕ್ಕೆ ಆಗಮಿಸಿದ ವಿಟ್ಲ ಪೊಲೀಸರು ಬಸವ ಹೋರಿಯನ್ನು ಚಿಕಿತ್ಸೆ ಹಾಗೂ ಉಪಚಾರಣೆ ಮಾಡಲು ಸೂಚಿಸಿದರು ...ಹಿಂದೂ ಸಂಘಟನೆಯ ಕಾರ್ಯಕರ್ತರು ಹೋರಿಯನ್ನು ಉಪಚಾರ ಮಾಡಿದರು ....ಇಂತದ್ದೇ ಹೋರಿ ಬಸವಗಳು ವಿಟ್ಲಪೇಟೆಯಲ್ಲಿ ಹತ್ತಕ್ಕಿಂತ ಜಾಸ್ತಿ ಇದೆ ಹಾಗೂ ಈ ಹೋರಿಗಳು ವಿಟ್ಲ ಪಂಚಲಿಂಗೇಶ್ವರ, ಭಗವತಿ , ಅಯ್ಯಪ್ಪ ದೇವಸ್ಥಾನದ ಆಸು ಪಾಸಿನಲ್ಲಿ ವಾಸ ಮಾಡುವ ಹೋರಿ ಬಸವಗಳು ಆಗಿರುತ್ತದೆ..
ಹಿಂದೂ ಸಂಘಟನೆಯ ಕಾರ್ಯಕರ್ತರು ಅನಾರೋಗ್ಯದಿಂದ ಕಷ್ಟ ಬರುತ್ತಾ ಇದ್ದ ಹೋರಿಯ ಆರೋಗ್ಯಕ್ಕೆ ಹಾಗೂ ರಕ್ಷಣೆ ಮಾಡಿದ ಪ್ರತ್ಯೇಕ ಕಾರ್ಯಕರ್ತರಿಗೆ ದೇವರ ಆಶೀರ್ವಾದ ಇರಲಿ ಎಂದು ಹಿರಿಯರ ಸಮ್ಮುಖದಲ್ಲಿ ಪಂಚಲಿಂಗೇಶ್ವರ ದೇವರ ಸಮಕ್ಷ ಪ್ರಾರ್ಥನೆ ಮಾಡಲಾಯಿತು ಹಾಗೂ ಪೇಟೆಯ ಹೋರಿ ಪೇಟೆಯಲ್ಲಿ ಇರಲಿ ಎಂದು ನಿರ್ಣಯ ಮಾಡಲಾಯಿತು
ಈ ಸಂದರ್ಭದಲ್ಲಿ ವಿಟ್ಲ ಆಸುಪಾಸಿನ ಹಿಂದೂ ಕಾರ್ಯಕರ್ತರು ಹಾಗೂ ಪ್ರಮುಖರು ಉಪಸ್ಥಿತಿಯಲ್ಲಿದ್ದರು
ಹಿಂದೂ ಸಮಾಜದಲ್ಲಿ ಗೋವು ಪೂಜನೀಯಾ ಎಂದು ತಿಳಿಸಿದರು...