ಫರಂಗಿಪೇಟೆ: ಕಳೆದ ವಾರ ನಾಪತ್ತೆಯಾದ ಫರಂಗಿಪೇಟೆಯ ದಿಗಂತ್ ನಾಪತ್ತೆ ಪ್ರಕರಣದಲ್ಲಿ ಈ ವರೆಗೂ ಯಾವುದೇ ಸುಳಿವು ಸಹ ದೊರೆತಿಲ್ಲ. ಇತ್ತೀಚೆಗೆ ಈ ಪ್ರಕರಣವು ದ.ಕ ದಲ್ಲಿ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.
ಅವರ ಕುಟುಂಬಕ್ಕೆ ಧೈರ್ಯ ತುಂಬುವ ಸಲುವಾಗಿ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಅವರ ಮನೆಗೆ ಭೇಟಿ ನೀಡಿದರು. ಈ ವೇಳೆ ಅವರು ದಿಗಂತ್ ಅವರ ಪೋಷಕರಿಗೆ ಸಮಾಧಾನ ಹೇಳಿ, ಅವರ ಜೊತೆ ಮಾತನಾಡಿದರು. ಈ ಪ್ರಕರಣದ ತನಿಖೆಯ ಬಗ್ಗೆ ಸ್ಪಷ್ಟತೆ ಪಡೆಯಲು ಐ.ಜಿ ಮತ್ತು ಎಸ್.ಪಿ ಯವರೊಂದಿಗೆ ಚರ್ಚಿಸಿ ವಿವರಗಳನ್ನು ತಿಳಿದುಕೊಂಡರು. ಜೊತೆಗೆ, ದಿಗಂತ್ ಅವರ ಮನೆಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಪ್ರಕರಣದ ಪ್ರಗತಿಯ ಬಗ್ಗೆ ಸಮಾಲೋಚನೆ ನಡೆಸಿದರು.
ಈ ಭೇಟಿಯಲ್ಲಿ ಹಲವಾರು ಹಿಂದುತ್ವ ಪರ ಮುಖಂಡರು ಕೂಡ ಉಪಸ್ಥಿತರಿದ್ದರು. ವಿನೋದ್ ಕೊಡ್ಮಣ್, ವಿಶ್ವ ಹಿಂದೂ ಪರಿಷದ್ ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಕುಮಾರ್ ರೈ, ಬಜರಂಗದಳ ಜಿಲ್ಲಾ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ, ಕ. ಕೃಷ್ಣಪ್ಪ, ಸಂದೇಶ್ ಕಾಡಬೆಟ್ಟು ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಭಾಗವಹಿಸಿದರು.
ಅಪಹರಣದ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಮತ್ತು ತಪ್ಪಿತಸ್ಥರನ್ನು ಶೀಘ್ರವೇ ಪತ್ತೆ ಹಚ್ಚಬೇಕೆಂದು ಅವರು ಒತ್ತಿಹೇಳಿದರು.