ಉತ್ತರ ಪ್ರದೇಶ:ರಾಜಕೀಯ ರಂಗದಲ್ಲಿ ಇರುವವರು ಶಿಕ್ಷಣ ಇದ್ದರೂ ಇಲ್ಲದಿದ್ದರೂ ಕೆಲವರು ನಾಯಿಗಿಂತ ಕೀಳಾಗಿ ವರ್ತಿಸುತ್ತಾರೆ. ಶುಚಿತ್ವ, ಆಡುವ ಭಾಷೆ, ವರ್ತನೆ ಇವೆಲ್ಲವೂ ಅತ್ಯಂತ ನಿಕೃಷ್ಟವಾಗಿರುತ್ತದೆ. ಉನ್ನತ ಸ್ಥಾನದಲ್ಲಿದ್ದರೂ ಸಣ್ಣ ಮಟ್ಟದಲ್ಲಿ ವರ್ತಿಸುತ್ತಿರುತ್ತಾರೆ. ಇದೀಗ ವಿಧಾನಸಭೆಯಲ್ಲಿ ಶಾಸಕನೋರ್ವನ ವರ್ತನೆಗೆ ಸ್ಪೀಕರ್ ಗರಂ ಆಗಿದ್ದಾರೆ.
ವಿಧಾನಸಭೆಯೊಳಗೆ ಪಾನ್ ಮಸಾಲ ಜಗಿದು ಉಗಿದ ಶಾಸಕ...!!
ಶಾಸಕರೊಬ್ಬರು ಪಾನ್ ಮಸಾಲ ತಿಂದು ಅಲ್ಲೇ ಉಗುಳಿದ ಘಟನೆ ಉತ್ತರಪ್ರದೇಶದ ವಿಧಾನಸಭೆಯಲ್ಲಿ ನಡೆದಿದೆ. ವಿಧಾನಸಭೆಯ ಸಭಾಂಗಣದಲ್ಲಿ ಶಾಸಕರು ಉಗುಳಿರುವ ಘಟನೆಯನ್ನು ಸ್ಪೀಕರ್ ಸತೀಶ್ ಮಹಾನ್ ಅವರು ಪ್ರಸ್ತಾಪಿಸಿದ್ದಾರೆ. ಉಗುಳಿದ ಕಲೆಗಳನ್ನು ತಾವೇ ಸ್ವಚ್ಛಗೊಳಿಸಿರುವುದಾಗಿ ಹೇಳಿ
ಸದನದ ಸದಸ್ಯರು ನಾಚಿಕೆಗೀಡಾವಂತೆ ಮಾಡಿದ್ದಾರೆ. ಇದರಿಂದ ಶಾಸಕರಿಗೆ ಅವಮಾನವಾಗಿದೆ. ಹಾಗೆಯೇ ಆ ಶಾಸಕನ ವರ್ತನೆಗೆ ಇತರ ಶಾಸಕರು ಕೂಡಾ ಬೇಸರ ವ್ಯಕ್ತಪಡಿಸಿದ್ದಾರೆ.
ಯಾರು ಉಗುಳಿದ್ದು ಎಂಬುವುದು ಗೊತ್ತಿದೆ, ತಪ್ಪೊಪ್ಪಿಕೊಳ್ಳಿ- ಸ್ಪೀಕರ್
ಉಗುಳಿದ ಶಾಸಕರು ಯಾರು ಎಂಬುವುದನ್ನು ವೀಡಿಯೋದಲ್ಲಿ ನೋಡಿದ್ದೇನೆ. ನೇರವಾಗಿ ಹೇಳಿ ಯಾರನ್ನೂ ಅವಮಾನಿಸುವ ಉದ್ದೇಶ ನನ್ನದಲ್ಲ. ನಾನು ಅವರ ಹೆಸರನ್ನು ಪ್ರಸ್ತಾಪಿಸುವುದಿಲ್ಲ. ಇನ್ಮುಂದೆ ಯಾರಾದ್ರೂ ಈ ರೀತಿ ಮಾಡುವುದು ಕಂಡರೆ ಅದನ್ನು ತಡೆಯಬೇಕು ಅಂತ ನಾನು ಸದಸ್ಯರಿಗೆ ಒತ್ತಾಯಿಸುತ್ತೇನೆ. ಸದನವನ್ನು ಸ್ವಚ್ಛವಾಗಿಡುವುದು ನಮ್ಮ ಜವಾಬ್ದಾರಿ. ಶಾಸಕರು ಅವರಾಗಿಯೇ ಈ ತಪ್ಪು ಮಾಡಿದ್ದಾರೆಂದು ಹೇಳಿದ್ರೆ ಒಳ್ಳೆಯದು. ಇಲ್ಲವಾದಲ್ಲಿ ನಾನೇ ಅವರನ್ನು ಕರೆಯುತ್ತೇನೆ ಎಂದು ಖಡಕ್ ಆಗಿ ಎಚ್ಚರಿಸಿದ್ದಾರೆ.