ಇವರೆಂಥಾ ಮಕ್ಕಳು..!! ತಾಯಿ ಶವದ ಎದುರು ಹಣಕ್ಕಾಗಿ ಮಕ್ಕಳ ರಂಪಾಟ....!! ಪೊಲೀಸ್ ಠಾಣೆಯೆದುರು ಹೆಣವಿಟ್ಟು ಹೈಡ್ರಾಮಾ...!!

  • 06 Mar 2025 01:57:58 PM

ಚಿಕ್ಕಬಳ್ಳಾಪುರ: ಹಣಕ್ಕಾಗಿ ಜನ ಏನು ಮಾಡಲು ಹೇಸೋದಿಲ್ಲ ಅನ್ನೋದು ಸುಮ್ಮನೆಯಲ್ಲ ಬಿಡಿ. ಹಣ ಕಂಡ್ರೆ ಹೆಣನೂ ಬಾಯಿ ಬಿಡುತ್ತೆ ಅಂತ ಹಿರಿಯರು ಸೃಷ್ಟಿಸಿರುವ ಗಾದೆ ಅಕ್ಷರಶಃ ಸತ್ಯ. ಹಣದ ಲಾಭಕ್ಕಾಗಿಯೇ ಇವತ್ತು ಅದೆಷ್ಟೋ ದುಷ್ಕೃತ್ಯಗಳು ನಡೆಯುತ್ತಿದೆ. ಹಣದ ಎದುರು ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಇದೀಗ ಹೆತ್ತ ತಾಯಿಯ ಹೆಣದ ಎದುರು ತನ್ನ ಮಕ್ಕಳು ಹಣಕ್ಕಾಗಿ ರಂಪಾಟ ನಡೆಸುತ್ತಿರುವ ಅಪರೂಪದ ಘಟನೆಯೊಂದು ನಡೆದಿದೆ. 

 

ನಿಧನರಾದ ತಾಯಿ, ಆಕೆಯ ಅಕೌಂಟ್ ನಲ್ಲಿದ್ದ ಹಣಕ್ಕೆ ಕಚ್ಚಾಡಿಕೊಂಡ ಮಕ್ಕಳು...!!

 

ಪೊಲೀಸ್ ಠಾಣೆಯ ಎದುರು ತಾಯಿಯ ಶವವಿರಿಸಿ ಆಕೆಯ ಹಣಕ್ಕಾಗಿ ತನ್ನ ಮಕ್ಕಳು ರಂಪಾಟ ನಡೆಸಿ ಹೈಡ್ರಾಮಾ ಮಾಡಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ತಾಯಿ ಬಳಿಯಿರುವ ಹಣವನ್ನು ಸರಿಯಾಗಿ ಹಂಚಿಕೆ ಮಾಡುವವರೆಗೂ ತಾಯಿಯ ಶವ ಹೂಳಲೂ ಅವಕಾಶ ನೀಡದೆ ಮಕ್ಕಳು ಕಿತ್ತಾಡಿಕೊಂಡಿದ್ದಾರೆ. ಅನಂತಕ್ಕ ಎಂಬ ಮಹಿಳೆ ನಿಧನರಾಗಿದ್ದು ಅವರಿಗೆ ಸೇರಿದ ಜಮೀನಿನಿಂದ ತೊಂಭತ್ತಮೂರು ಲಕ್ಷಕ್ಕೂ ಅಧಿಕ ಹಣ ಅವರ ಖಾತೆಗೆ ಬಂದಿತ್ತು. ಈ ಹಣಕ್ಕಾಗಿ ರಂಪಾಟ ನಡೆಸಿದ್ದಾರೆ. 

 

ತಾಯಿಯ ಹೆಣದೆದುರು ಅಮಾನವೀಯವಾಗಿ ವರ್ತಿಸಿದ ಮಕ್ಕಳು....!

 

ಅನಂತಕ್ಕ ಅವರ ಹಣದಲ್ಲಿ ಹೆಣ್ಣು ಮಕ್ಕಳಿಗೆ ನಲ್ವತ್ತು ಲಕ್ಷ ನೀಡುವಂತೆ ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ ಗಂಡು ಮಕ್ಕಳು ಮಾತ್ರ ಈ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದರು. ಇದೇ ಕಾರಣಕ್ಕೆ ಗಲಾಟೆ ನಡೆದಿದೆ‌. ಇಡೀ ದಿನ ಸ್ಟೇಷನ್ ಮುಂಭಾಗ ಶವವಿಟ್ಟು ಅಮಾನವೀಯ ವರ್ತನೆ ತೋರಿಸಿದ್ದಾರೆ. ನಂತರ ಸ್ಥಳಕ್ಕೆ ತಹಶೀಲ್ದಾರ್ ಅವರು ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.