ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ನ ವ್ಯಾಪ್ತಿಯ ಗಾಳಿಮುಖ ಎಂಬಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಅಲಂಕಾರಕ್ಕೆ ಬಳಸಿದ ಅಡಕೆ ಮರಗಳು ಕಾರ್ಯಕ್ರಮ ಮುಗಿದು ತಿಂಗಳುಗಳೇ ಕಳೆದರೂ ತೆರವು ಮಾಡದೆ ವಾಹನ ಸವಾರರಿಗೆ ಪ್ರತಿನಿತ್ಯ ಕಿರಿಕಿರಿ ಕಾರ್ಯಕ್ರಮದ ಆಯೋಜಕರಿಗೆ ಹಿಡಿ ಶಾಪ ಹಾಕುತ್ತಿರುವ ಸಾರ್ವಜನಿಕರು ವಿಷಯ ತಿಳಿದರೂ ಕಣ್ಣು ಮುಚ್ಚಿ ಕುಳಿತಿರುವ ಆ ಭಾಗದ ಪಂಚಾಯತ್ ಸದಸ್ಯರು ಹಾಗೂ ಗ್ರಾಮ ಪಂಚಾಯತ್
ಹೌದು ಗಾಳಿಮುಖದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದಕ್ಕೆ ಅಳವಡಿಸಿದ ಅಡಕೆ ಮರಗಳು ಅಪಾಯಕಾರಿ ಪರಿಸ್ಥಿತಿಯಲ್ಲಿವೆ ಸ್ಥಳೀಯಾಡಳಿತ ಮತ್ತು ಈಶ್ವರ ಮಂಗಲ ಹೊರಠಾಣೆಯ ಅಧಿಕಾರಿಗಳು ಕಣ್ಣಿದ್ದು ಕುರುಡರಾಗಿದ್ದಾರೆ
ಕಾರ್ಯಕ್ರಮ ಮುಗಿದು ತಿಂಗಳುಗಳೇ ಕಳೆದು ಹೋದರೂ ಕಂಬ ಅಳವಡಿಸಿದವರಿಗೆ ಅದನ್ನು ತೆಗೆಯುವ ನೆನಪೇ ಇಲ್ಲವಾಗಿದೆ ಸಾರ್ವಜನಿಕರಿಗೆ ವಾಹನ ಸವಾರರಿಗೆ ಅಪಾಯಕಾರಿಯಾಗಿದ್ದು ಎರಡು ವಾಹನ ಚಲಿಸಲು ಅಸಾಧ್ಯವಾದ ಪರಿಸ್ಥಿತಿಯಲ್ಲಿದೆ
ಇನ್ನಾದರೂ ಎಚ್ಚತ್ತು ಕೊಂಡು ಸ್ಥಳೀಯಾಡಳಿತ ಇದನ್ನು ತೆರವು ಮಾಡುವ ಪ್ರಯತ್ನ ಮಾಡುತ್ತಾರೋ ಎಂದು ಕಾದು ನೋಡಬೇಕಿದೆ