ಚಿಕ್ಕಮಂಗಳೂರು: ಭಾರತ ದೇಶ ಸಂಸ್ಕೃತಿಯ ನಾಡು. ಸಂಸ್ಕಾರ, ಆಚಾರ, ವಿಚಾರಗಳಿಗೆ ಪ್ರಾಧಾನ್ಯತೆ ಹೊಂದಿರುವ ಭಾರತ ದೇಶಕ್ಕೆ ಬೇರೆ ಸಾಟಿಯೇ ಇಲ್ಲ ಎಂದೆಲ್ಲ ನಾವುಗಳು ಬೊಗಳೆ ಬಿಡುತ್ತೇವೆ. ಆದರೆ ಭಾರತ ದೇಶದಲ್ಲಿ ಆಗುತ್ತಿರೋದೇನು..? ಪ್ರತಿನಿತ್ಯ ಅಪ್ರಾಪ್ತರ ಮೇಲೆ, ಹೆಣ್ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಹಿಂಸೆ, ಕೊಲೆ ಪ್ರಕರಣಗಳು.....ಇದೀಗ ರಾಜ್ಯವೇ ಬೆಚ್ಚಿ ಬೀಳಿಸುವ ಘಟನೆಯೊಂದು ಚಿಕ್ಕಮಗಳೂರಿನಲ್ಲಿ ನಡೆದಿದೆ.
ತಂಗಿ ಏಳು ತಿಂಗಳ ಗರ್ಭಿಣಿ...!! ಅಣ್ಣನೇ ಮಗುವಿನ ತಂದೆ...!
ಅಣ್ಣನೇ ತಂಗಿಯನ್ನ ಗರ್ಭಿಣಿ ಮಾಡಿದ ಘಟನೆ ಚಿಕ್ಕಮಗಳೂರಿನ ಮಲೆನಾಡು ತಾಲ್ಲೂಕಿನ ಕುಗ್ರಾಮದಲ್ಲಿ ನಡೆದಿದೆ. ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವ ಘಟನೆ ಇದಾಗಿದ್ದು ಗ್ರಾಮದ ಜನತೆಯೇ ಬೆಚ್ಚಿಬಿದ್ದಿದ್ದಾರೆ. ಮೊದಲ ವರ್ಷದ ಪಿಯುಸಿ ಓದುತ್ತಿರುವ 17 ವರ್ಷದ ಬಾಲಕಿಯನ್ನು ಆಕೆಯ ಅಣ್ಣನೇ (ದೊಡ್ಡಪ್ಪನ ಮಗ) 7 ತಿಂಗಳ ಗರ್ಭಿಣಿ ಮಾಡಿದ್ದಾನೆ. ಈ ಕುರಿತು ಶೃಂಗೇರಿ ವಿಧಾನಸಭಾ ಕ್ಷೇತ್ರದ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕೌನ್ಸಿಲಿಂಗ್ ಮಾಡಿದ್ರೂ ಬಾಯಿ ಬಿಡದ ಬಾಲಕಿ....!!
ಸಂತ್ರಸ್ತೆ ಅಪ್ರಾಪ್ತೆಗೆ ಪೊಲೀಸರು ಸಾಕಷ್ಟು ರೀತಿಯ ಕೌನ್ಸೆಲಿಂಗ್ ಮಾಡಿದ್ದರು. ಆದರೆ ಆಕೆ ಆತಂಕದಿಂದ ಬಾಯಿ ಬಿಟ್ಟಿರಲಿಲ್ಲ.
ಆದರೆ ಮೂರು ದಿನದ ಬಳಿಕ ಬಾಲಕಿ ತಾನಾಗಿಯೇ ಪೊಲೀಸರ ಮುಂದೆ ನಿಜ ಹೇಳಿದ್ದಾಳೆ. ಆಕೆ ಹೇಳಿದ ವಿಷಯ ಕೇಳಿ ಸ್ವತಃ ಪೊಲೀಸರೇ ಅವಕ್ಕಾಗಿದ್ದಾರೆ. ಪೊಲೀಸ್ ಠಾಣೆಯಲ್ಲಿ ಈಗ ಬಾಲಕಿಯ ದೊಡ್ಡಪ್ಪನ ಮಗ 20 ವರ್ಷದ ಪ್ರಕಾಶ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ಆತನಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.