ಕಾಪು : ಕಾಪು ಮಾರಿಯಮ್ಮ ದೇಗುಲ ಹೊಸದಾಗಿ ನವೀಕರಣಗೊಂಡು ಬ್ರಹ್ಮಕಲಶೋತ್ಸವದ ಸಡಗರದಲ್ಲಿ ಮಿಂದೇಳುತ್ತಿದೆ. ಅದೆಷ್ಟೋ ದಾನಿಗಳ ಸಹಾಯದಿಂದ ನವೀಕೃತಗೊಂಡ ಈ ದೇವಸ್ಥಾನವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಕರಾವಳಿಯ ಮೂಲದಿಂದ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿರುವ ಸೆಲೆಬ್ರೆಟಿಗಳು ಕೂಡಾ ಈ ಮಣ್ಣಿನ ಕಾರಣಿಕತೆಯನ್ನು ಮರೆತಿಲ್ಲ. ಹೌದು. ಬಾಲಿವುಡ್ ನ ಅನೇಕ ಸಿನಿ ತಾರೆಯರು ಸನ್ನಿಧಾನಕ್ಕೆ ಭೇಟಿ ನೀಡುತ್ತಿದ್ದಾರೆ.
ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ನಟಿ ಪೂಜಾ ಹೆಗ್ಡೆ...!
ಬಾಲಿವುಡ್ ಬೆಡಗಿ, ಕಣ್ಣಿನಲ್ಲೇ ಹುಡುಗರ ಮನಸ್ಸು ಗೆದ್ದ ನಟಿ ಪೂಜಾ ಹೆಗ್ಡೆ ಅವರು ಉಡುಪಿಯ ಕಾಪು ಮಾರಿಗುಡಿಯ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಕುಟುಂಬದ ಜೊತೆ ಭಾಗಿಯಾಗಿ ಕಾಪು ಮಾರಿಯಮ್ಮನ ದರ್ಶನ ಪಡೆದು ಪುನೀತರಾಗಿದ್ದಾರೆ. ಪೂಜಾ ಹೆಗ್ಡೆ ಮೂಲತಃ ಮಂಗಳೂರಿನವರು. ಅದೆಷ್ಟೇ ಬೆಳೆದರೂ ಇವರು ಕರಾವಳಿ ನೆಲದ ನಂಟನ್ನು ಬಿಟ್ಟಿಲ್ಲ. ಹಾಗಾಗಿ ಆಗಾಗ ಕರಾವಳಿ ಭಾಗದ ದೇವಸ್ಥಾನಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಇದೀಗ ತನ್ನ ಕುಟುಂಬದ ಜೊತೆ ಕಾಪು ಮಾರಿಗುಡಿ ಕ್ಷೇತ್ರಕ್ಕೆ ನಟಿ ಭೇಟಿ ನೀಡಿ ವಿಶೇಷವಾದ ಪೂಜೆಯನ್ನು ಸಲ್ಲಿಸಿದ್ದಾರೆ.
ಮಾರಿಗುಡಿ ಕ್ಷೇತ್ರಕ್ಕೆ ಅನೇಕ ಸಿನಿ ತಾರೆಯರ ಭೇಟಿ...!!
ಕಾಪು ಮಾರಿಯಮ್ಮನ ಸನ್ನಿಧಾನದಲ್ಲಿ ಬ್ರಹ್ಮಕಲಶೋತ್ಸವ ಆರಂಭಗೊಂಡಂದಿನಿಂದ ನಿತ್ಯ ಸೆಲೆಬ್ರೆಟಿಗಳು ಭೇಟಿ ನೀಡುತ್ತಲೇ ಇದ್ದಾರೆ. ನಟಿಯರಾದ ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್, ಕ್ರಿಕೆಟ್ ಸ್ಟಾರ್ ಸೂರ್ಯಕುಮಾರ್ ಯಾದವ್ ಸೇರಿದಂತೆ ಅನೇಕರು ಭೇಟಿ ನೀಡಿದ್ದರು. ಈಗ ಪೂಜಾ ಹೆಗ್ಡೆ ಕೂಡಾ ಭೇಟಿ ನೀಡಿ ಕ್ಷೇತ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ ಸದ್ಯಕ್ಕೆ ನಟಿ ಪೂಜಾ ಹೆಗ್ಡೆ ಅವರು ಸುನೀಲ್ ಶೆಟ್ಟಿ ಪುತ್ರನಿಗೆ ನಾಯಕಿಯಾಗಿ ಬಾಲಿವುಡ್ ಚಿತ್ರ, ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾದಲ್ಲಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಲಿದ್ದಾರೆ.