ಕರಾವಳಿಯಲ್ಲಿ ಸುಡುತ್ತಿರುವ ಈ ಬಿಸಿಲಿಗೆ ಹೊರಗೆ ಹೋಗಲೂ ಮನಸ್ಸಾಗೋದಿಲ್ಲ. ವಿಪರೀತ ಬಿಸಿಲು, ಸುಡುವ ಸೆಕೆಯಿಂದ ಜನ ಹೈರಾಣಾಗಿದ್ದಾರೆ.
ಕರಾವಳಿಯಲ್ಲಿ ಏರಿಕೆ ಕಂಡ ತಾಪಮಾನ..!
ದ.ಕ ಭಾಗದಲ್ಲಿ ಕಳೆದೆರಡು ವಾರಗಳಿಂದ ತಾಪಮಾನ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ ಮೊದಲು ಎಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಉಷ್ಣಾಂಶ ಹತ್ತು ಡಿಗ್ರಿ ಸೆಲ್ಸಿಯಸ್ ದಾಟುತ್ತಿತ್ತು. ಈ ಬಾರಿ ತಾಪಮಾನ ಫೆಬ್ರವರಿ ತಿಂಗಳ ಅಂತ್ಯದಲ್ಲೇ ಈ ಗೆರೆಯನ್ನು ಟಚ್ ಮಾಡಿದೆ. ಮಾರ್ಚ್ ಮೊದಲ ವಾರದಲ್ಲೇ ಕರಾವಳಿ ಗರಿಷ್ಠ ತಾಪಮಾನ ಕಾಣುತ್ತಿರುವುದರಿಂದ ಸದ್ಯದಲ್ಲೇ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಹವಾಮಾನ ಇಲಾಖೆ ಏನು ಹೇಳುತ್ತೆ...?
ಕಳೆದ ಒಂದು ವಾರದಿಂದ ನಾಲ್ಕೈದು ದಿನ ಬಿಸಿ ಗಾಳಿಯ ಮುನ್ಸೂಚನೆ ಕೂಡಾ ಇತ್ತು. ಐದು ವರ್ಷದ ಹಿಂದೆ ಫೆಬ್ರವರಿ ತಿಂಗಳಿನಲ್ಲಿ ಈ ಭಾಗದಲ್ಲಿ ಅಕಾಲಿಕ ಮಳೆಯಾಗಿತ್ತು. ಬಿಸಿಲಿನ ಉರಿಯಿಂದಾಗಿ ಮೋಡಗಳು ಕೂಡಾ ಸೃಷ್ಟಿಯಾಗುತ್ತಿದೆ. ಇನ್ನು ಬರುವ ವಾರದಲ್ಲಿ ದ.ಕ, ಉಡುಪಿ ಜಿಲ್ಲೆಯಾದ್ಯಂತ ಮಳೆ ಸುರಿಯುವ ಸಾಧ್ಯತೆ ಇದೆ. ಒಂದೊಮ್ಮೆ ಮಳೆ ಸುರಿದರೆ ಉಷ್ಣಾಂಶವೂ ತುಸು ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.