ವೀರಕಂಭ ಗ್ರಾಮ ಪಂಚಾಯತ್ ನ ಒಡೆದು ಆಳುವ ನೀತಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಹಿಂದೂ ಪ್ರಮುಖರು.

  • 17 Oct 2024 11:33:19 PM

ವೀರಕಂಬ : ವೀರಕಂಬ ಪಂಚಾಯಿತಿ ವ್ಯಾಪ್ತಿಯ ಮಂಗಳಪದವು ಎಂಬಲ್ಲಿ ಹಿಂದೂ ಜಟ್ಕಾ ಕಟ್ ಕೋಳಿ ಮಾಂಸದ ಅಂಗಡಿಯನ್ನು ತೆರೆವು ಮಾಡ್ಬೇಕು ಎಂದು ನೋಟೀಸು ಜಾರಿ ಮಾಡಿದ ಹಿನ್ನಲೆಯಲ್ಲಿ 'ಸ್ಥಾನೀಯ ಹಿಂದೂ ಹೋರಾಟ ಸಮಿತಿಯ ಪ್ರಮುಖರು' ವೀರಕಂಬ ಪಂಚಾಯಿತಿ ಪಿಡಿಒ ಅವರನ್ನು ಬೇಟಿ ಮಾಡಿ ವೀರಕಂಭ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಅನಧೀಕೃತ ಅಂಗಡಿಗಳಿಗೆ ತಕ್ಷಣ ನೋಟೀಸು ಜಾರಿ ಮಾಡಿ ತೆರವುಮಾಡಬೇಕು ಎಂದು ಆಗ್ರಹಿಸಿದರು. ಅದೆಷ್ಟೋ ಅಂಗಡಿಗಳು ಅನಧೀಕೃತವಾಗಿ ನಡೆಯುತ್ತಿದ್ದು, ಹಿಂದೂ ಜಟ್ಕ ಕೋಳಿ ಮಾಂಸದ ಅಂಗಡಿಗೆ ಮಾತ್ರ ನೋಟೀಸು ಕೊಟ್ಟು 'ಒಡೆದು ಆಳುವ ನೀತಿ' ಎಂದು ಹಿಂದೂ ಹೋರಾಟ ಸಮಿತಿಯ ಪ್ರಮುಖರು ಆರೋಪಿಸಿದರು...ಹೊಸ ಸರಕಾರ ರಚನೆ ಆದ ನಂತರದ ದಿನದಿಂದ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಿದೆ ಎಂದು ಆರೋಪಿಸಿದರು.

ಕಾನೂನು ಎಲ್ಲರಿಗೂ ಒಂದೇ ಇರಲಿ ಎಂದು ಭೇದಬಾವ ಮಾಡಿದರೆ ಸಹಿಸುವುದಿಲ್ಲ ಎಂದು ಹಿಂದೂ ಪ್ರಮುಖರು‌ ತಿಳಿಸಿದರು.