ವಿಜಯಪುರ: ವಿಜಯಪುರದ ಹೊನ್ನುಟಗಿ ಗ್ರಾಮದಲ್ಲಿ ಸೌಹಾರ್ದತೆಯಿಂದ ಮುಸ್ಲಿಂ ಸಮುದಾಯದ ಅಂತ್ಯಸಂಸ್ಕಾರಕ್ಕಾಗಿ ಜಾಗ ನೀಡಿದ್ದ ಹಿನ್ನೆಯಲ್ಲಿ, ಹಿಂದೂ ಕುಟುಂಬಕ್ಕೆ ವಕ್ಸ್ ಬೋರ್ಡ್ ನಿಂದ ಆಸ್ತಿಯ ಹಕ್ಕು ಪಡೆಯಲು ನೋಟಿಸ್ ನೀಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸುರೇಶ್ ತೆರದಾಳ್ ಅವರ ಕುಟುಂಬ, ಮಾನವೀಯತೆ ಪರಿಗಣಿಸಿ ಅಂತ್ಯಸಂಸ್ಕಾರಕ್ಕಾಗಿ ತುಸು ಜಾಗ ಒದಗಿಸಿದ್ದರು. ಆದರೆ, ಈ ಜಾಗದ ಹಕ್ಕಿಗೆ ಯಾವುದೇ ದಾಖಲೆ ನೀಡದ ಕಾರಣದಿಂದ, ಈಗ ವಕ್ಸ್ ಬೋರ್ಡ್ ಈ ಜಾಗ ಸೇರಿದಂತೆ 13.8 ಎಕರೆ ಭೂಮಿಯನ್ನು ತನ್ನದಾಗಿ ಘೋಷಿಸಿದೆ.
ಸರ್ಕಾರವು ರೈತರ ಜಮೀನುಗಳನ್ನು ತೆಗೆದುಕೊಳ್ಳುವುದಿಲ್ಲವೆಂದು ಹೇಳಿದಂತೆಯೇ, ಅವರ ಜಮೀನಿನ ಪಹಣಿಯಲ್ಲಿ ವರ್ಕ್ಸ್ ಬೋರ್ಡ್ ಎಂದು ದಾಖಲಿಸಿರುವುದನ್ನು ಕೂಡಲೇ ತೆರವುಗೊಳಿಸಬೇಕೆಂದು ಅವರ ಕುಟುಂಬದವರು ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ. ಇದರಿಂದ ರೈತ ಕುಟುಂಬಕ್ಕೆ ಅನ್ಯಾಯವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ರಾಜ್ಯದಲ್ಲಿ ಈ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿದೆ. ವಕ್ಸ್ ಬೋರ್ಡ್ ಕೇವಲ ದಾನವಾದ ಆಸ್ತಿಗಳನ್ನು ಮಾತ್ರ ವಶಪಡಿಸಿಕೊಳ್ಳುವುದಾಗಿ ಹೇಳುತ್ತಿದೆ. ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ