ಪುತ್ತೂರು : ಇತ್ತೀಚಿನ ದಿನಗಳಲ್ಲಿ ಪ್ರೀತಿ, ಪ್ರೇಮ ಇಂತಹ ಯಾವುದೇ ಸಂಬಂಧಗಳು ತನ್ನ ಮೌಲ್ಯವನ್ನು ಉಳಿಸಿಕೊಂಡಿಲ್ಲ. ನೀಚ ಹುಡುಗರಂತೂ ಹೆಣ್ಮಕ್ಕಳು ಇರುವುದೇ ಅವರ ಪೌರುಷ್ಯ ಮೆರೆಯಲು ಎಂಬಂತೆ ಹೇಗೆ ಬೇಕೋ ಹಾಗೆ ಚಿತ್ರಹಿಂಸೆ ನೀಡಿ ಕಾಟ ಕೊಡುತ್ತಾರೆ. ಪ್ರೀತಿಯ ನೆಪದಲ್ಲಿ ತಮಗನಿಸಿದಂತೆ ಆಟಿಕೆಯಂತೆ ಟ್ರೀಟ್ ಮಾಡುತ್ತಾರೆ. ರಾಕ್ಷಸ ಪ್ರವೃತ್ತಿಯ ಇಂತಹ ಹುಡುಗರಿಗೆ ಪ್ರೀತಿ ಏಕೆ...? ಹೆಣ್ಣೇಕೆ ಎಂಬುವುದೇ ಪ್ರಶ್ನೆ....! ಇದೀಗ ದ.ಕ ಜಿಲ್ಲೆಯ ಸುಳ್ಯದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ.
ಕೆವಿಜೆ ಕಾಲೇಜಿನ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ...!!
ಸುಳ್ಯ ಕೆವಿಜೆ ಡೆಂಟಲ್ ಕಾಲೇಜಿನ ವಸತಿ ಗೃಹದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದು ಎಂಟು ದಿನಗಳೇ ಕಳೆದಿದೆ. ಸುಳ್ಯ ಕೆವಿಜೆ ಕಾಲೇಜಿನ ವಿದ್ಯಾರ್ಥಿನಿ, ಇಪ್ಪತ್ತೊಂದು ವರ್ಷದ ಬೆಳಗಾವಿ ಮೂಲದ ಕೃತಿಕಾ ಸಿದ್ದಣ್ಣ ನಿಡೋಣಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ತಾನು ವಾಸ್ತವ್ಯವಿದ್ದ ಕೊಠಡಿಯ ಫ್ಯಾನ್ ಗೆ ನೇಣು ಬಿಗಿದು ಜೀವಾಂತ್ಯಗೊಳಿಸಿದ್ದಳು. ಅದಕ್ಕೂ ಮೊದಲು ಯಾರಿಗೋ ಫೋನ್ ಮಾಡಿ ನಾನು ಸಾಯುತ್ತೇನೆ ಎಂದು ಕೂಡಾ ಹೇಳ್ತಾ ಇದ್ದಳು ಎಂಬ ಮಾಹಿತಿ ಲಭ್ಯವಾಗಿದೆ.
ವಸತಿ ಗೃಹದ ಮೇಲ್ವಿಚಾರಕಿ ಮೇಲೆ ದೂರು ದಾಖಲು...!
ಮೃತ ವಿದ್ಯಾರ್ಥಿನಿ ತಂದೆ ಪುತ್ತೂರಿನ ನವೀನ್ ಎಂಬಾತನ ಮೇಲೆ ಮತ್ತು ಹಾಸ್ಟೆಲ್ ಮೇಲ್ವಿಚಾರಕಿ, ಪುತ್ತೂರು ನಿವಾಸಿ ತಾರಾ ಅವರ ಮೇಲೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಅದೇ ಕಾಲೇಜಿನಲ್ಲಿ ಓದುತ್ತಿದ್ದ ನವೀನ್ ಎಂಬಾತ ಕೃತಿಕಾಗೆ ಪದೇ ಪದೇ ಕಾಲ್ ಮಾಡಿ, ತೊಂದರೆ ಕೊಟ್ಟು, ಮಾನಸಿಕ ಹಿಂಸೆ ನೀಡಿ ಫೋಟೋ ಮತ್ತು ವೀಡಿಯೋಗಳನ್ನು ತಂದೆಗೆ ಕಳುಹಿಸುತ್ತೇನೆ ಎಂದು ಧಮ್ಕಿ ಹಾಕುತ್ತಿದ್ದ.
ಇದರಿಂದ ನೊಂದು ಭಯಗೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಇದ್ಯಾವುದನ್ನೂ ಗಮನಿಸದೆ, ಪಾಲಕರ ಗಮನಕ್ಕೂ ತರದೆ ಕರ್ತವ್ಯ ಲೋಪ ಎಸಗಿರುವುದು ಖಂಡನೀಯ ಎಂದು ಮೃತಳ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುತ್ತೂರಿನ ನವೀನ್ ಇದೀಗ ಎಸ್ಕೇಪ್ ಆಗಿದ್ದು ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.