ದೇಶದಲ್ಲಿ ಕೋಮು ಸಂಘರ್ಷಕ್ಕೆ ಬತ್ತಿ ಇಡುತ್ತಾ ಶಾಂತಿಯ ವಾತಾವರಣವನ್ನು ಹದಗೆಡಿಸಲು ಅದೆಷ್ಟೋ ತುಚ್ಛ ಮನಸ್ಥಿತಿಗಳು ಕಾಯುತ್ತಲೇ ಇರುತ್ತದೆ. ದೇಶಕ್ಕೆ ದ್ರೋಹವೆಸಗುವ, ಭಯೋತ್ಪಾದನೆಯನ್ನು ಪ್ರೇರೇಪಿಸುವ ಕೆಲವು ಜಿಹಾದಿಗಳ ಅನಧಿಕೃತ ಸಂಘಟನೆಗಳು ಕೂಡಾ ಇದಕ್ಕೆ ಹೊರತಾಗಿಲ್ಲ.
ದೇಶದ ಮೇಲೆ ಕಾಳಜಿ ಇರದ ಇಂತಹ ಅಲ್ಪ ಮನಸ್ಸಿನ ಬುದ್ಧಿಜೀವಿಗಳು ತಮ್ಮ ಎಸ್ಡಿಪಿಐನಂತಹ ಬೇರೆ ಬೇರೆ ಸಂಘಟನೆಗಳಲ್ಲಿ ಸಕ್ರಿಯರಾಗಿರುತ್ತಾರೆ. ಮೊನ್ನೆ ತಾನೇ ಈ ಸಂಘಟನೆಯ ಮುಖಂಡನನ್ನು ಬಂಧಿಸಿದ್ದು ಬಹುಶಃ ಎಲ್ಲರಿಗೂ ಗೊತ್ತೇ ಇದೆ. ಇದೀಗ ಮತ್ತೆ ಅವರಿಗೆ ಇ.ಡಿ ಶಾಕ್ ನೀಡಿದೆ.
ಎಸ್ಡಿಪಿಐ ಕಚೇರಿಗಳ ಮೇಲೆ ದಿಢೀರ್ ದಾಳಿ ಮಾಡಿದ ಇ.ಡಿ ಅಧಿಕಾರಿಗಳು...!
ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜೊತೆ ಸಂಪರ್ಕ ಹೊಂದಿರುವ ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಯ ಮೇಲೆ ಈಗಾಗಲೇ ಅನೇಕ ಬಗೆಯ ಆರೋಪಗಳಿವೆ.
ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧಿಸಿದಂತೆ ಬೆಂಗಳೂರು ಸಹಿತ ಅನೇಕ ಕಡೆಗಳಲ್ಲಿ ಜಾರಿ ನಿರ್ದೇಶನಾಲಯ ಗುರುವಾರ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಪೈಝಿ ಬಂಧನದ ಬೆನ್ನಲ್ಲೇ ತನಿಖೆಯಲ್ಲಿ ಇ.ಡಿ ಅಲರ್ಟ್ ಆಗಿದೆ. ನಿಜಕ್ಕೂ ಈ ಸಂಘಟನೆಯ ಸದಸ್ಯರು ದಾಳಿ ನಡೆಸಿದಾಗ ಅವಕ್ಕಾಗಿದ್ದಾರೆ.
ದಾಳಿ ಬಗ್ಗೆ ಇ.ಡಿ ಅಧಿಕಾರಿಗಳು ಹೇಳೋದೇನು..?
ಪಿಎಫ್ಐ ಮತ್ತು ಎಸ್ಡಿಪಿಐ ನಡುವೆ ಸಂಘಟನಾತ್ಮಕವಾದ ಸಂಬಂಧವಿದೆ. ಇದರ ಜೊತೆಗೆ ರಾಜಕೀಯದ ಕೆಲವು ಬುದ್ಧಿಜೀವಿಗಳೂ ಸೇರಿಕೊಂಡು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. 2022ರಲ್ಲಿ ಕೇಂದ್ರ ಸರ್ಕಾರ ಪಿಎಫ್ಐ ನ್ನು ಬ್ಯಾನ್ ಮಾಡಿತ್ತು.
ಆದರೆ ಎಸ್ಡಿಪಿಐ ಚುನಾವಣಾ ಆಯೋಗದಲ್ಲಿ ರಾಜಕೀಯ ಪಕ್ಷವಾಗಿಯೂ ನೋಂದಾಯಿಸಲ್ಪಟ್ಟಿದೆ ಎಂದು ಹೇಳಲಾಗುತ್ತಿದೆ. ಇದೀಗ ನಾವು ದೆಹಲಿಯ ಎರಡು ಕಡೆಗಳಲ್ಲಿ ಮತ್ತು ಕೇರಳ, ಚೆನ್ನೈ, ಆಂಧ್ರಪ್ರದೇಶ, ಕೋಲ್ಕತ್ತಾ, ಜೈಪುರ, ಲಖನೌ ಈ ಕಡೆಗಳಲ್ಲಿ ದಾಳಿ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.