ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 16ನೇ ಬಜೆಟ್ ಪ್ರಚಾರಕ್ಕಷ್ಟೇ ಸೀಮಿತವಾಗಿದೆ ಎಂದೂ ಬಡ್ಜೆಟ್ ನಿಂದ ಉಡುಪಿ ಜಿಲ್ಲೆಗೆ ಯಾವುದೇ ದೊಡ್ಡ ಯೋಜನೆಗಳನ್ನು ಘೋಷಿಸದೇ ನಿರಾಸೆಯನ್ನು ಮೂಡಿಸಿದೆ ಎಂದು ಯುವಮೋರ್ಚಾ ಉಡುಪಿ ಜಿಲ್ಲಾ ಅಧ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಪ್ರಮುಖ ಬೇಡಿಕೆಗಳಾದ ಮೆಡಿಕಲ್ ಕಾಲೇಜು, ಕೃಷಿ ಕಾಲೇಜು ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳ ಸ್ಥಾಪನೆಗೆ ಯಾವ ಪ್ರಸ್ತಾವನೆ ಕೂಡ ಈ ಬಜೆಟ್‌ನಲ್ಲಿ ಕಾಣಿಸಿಕೊಳ್ಳಲಿಲ್ಲವೆಂದೂ ಯುವ ಜನತೆಯ ಭವಿಷ್ಯಕ್ಕೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ಅಲ್ಲದೇ, ಉಡುಪಿ ಜಿಲ್ಲೆಯ ಪ್ರವಾಸೋದ್ಯಮವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಅವರು ಆರೋಪಿಸಿದರು. ಜಿಲ್ಲೆಯ ಅಭಿವೃದ್ಧಿಗಾಗಿ ಮಹತ್ವದ ಯೋಜನೆಗಳನ್ನು ನೀಡುದರ ಹೊರತಾಗಿ, ಬಜೆಟ್ ಅನ್ನು ಮುಖ್ಯವಾಗಿ ಅಲ್ಪಸಂಖ್ಯಾತರ ಓಲೈಕೆಗೆ ಸಮರ್ಪಿಸಿದಂತೆ ತೋರುತ್ತಿದೆ. ಉಡುಪಿ ಜಿಲ್ಲೆಗೆ ನಿರೀಕ್ಷಿತ ಅನುದಾನವೂ ಲಭ್ಯವಾಗದೆ, ಸರ್ಕಾರದ ನಿರ್ಲಕ್ಷ್ಯದಿಂದ ಜಿಲ್ಲೆಯ ಜನತೆ ತೀವ್ರ ನಿರಾಶೆಯಲ್ಲಿದ್ದಾರೆ ಎಂದು ಪ್ರಥ್ವೀರಾಜ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.