ಮದುವೆ ಅನ್ನೋದು ಎಲ್ಲರ ಜೀವನದಲ್ಲಿ ಆಗುವಂತಹ ಒಂದು ಪ್ರಮುಖವಾದ ಘಟ್ಟ. ಉಜ್ವಲ ಭವಿಷ್ಯದ ಬಗ್ಗೆ ಎಲ್ಲರಿಗೂ ಅವರದ್ದೇ ಆದ ಕನಸುಗಳಿರುತ್ತದೆ. ಅದಕ್ಕೆ ಎಷ್ಟೇ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೂ ಹೊರತಲ್ಲ. ಇತ್ತೀಚೆಗೆ ರಾಜಕೀಯ ರಂಗದಲ್ಲಿ ಇರುವವರು, ಸಿನಿಮಾ ರಂಗದ ಸೆಲೆಬ್ರೆಟಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಯುವ ಸಂಸದ, ಸ್ಟೈಲಿಶ್ ಪೊಲಿಟಿಕ್ಸ್ ಓರ್ವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಅವರ ಮದುವೆಗೆ ಸಾಕ್ಷಿಯಾದ ರಾಜಕೀಯ ಮುಖಂಡರು...!
ಬೆಂಗಳೂರಿನ ಯುವ ಸಂಸದ ತೇಜಸ್ವಿ ಸೂರ್ಯ ಅವರು ಕನಕಪುರದ ರೆಸಾರ್ಟ್ ಒಂದರಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಕರ್ನಾಟಕದ ಬಿಜೆಪಿಯ ದಿಗ್ಗಜರು ಈ ಮದುವೆಗೆ ಸಾಕ್ಷಿಯಾಗಿದ್ದಾರೆ. ಬುಧವಾರದಿಂದಲೇ ವಿವಾಹ ಪೂರ್ವ ಕಾರ್ಯಕ್ರಮಗಳು ಪ್ರಾರಂಭಗೊಂಡಿದ್ದು ವರಪೂಜೆ ಕಾರ್ಯಕ್ರಮ ಸಹಿತ ಕಾಶಿಯಾತ್ರೆ, ಜೀರಿಗೆ-ಬೆಲ್ಲ ಧಾರೆ, ನಿರೀಕ್ಷಣಾ ಮುಹೂರ್ತ, ಮಾಂಗಲ್ಯ ಧಾರಣೆ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆದವು. ಅಂದ ಹಾಗೆ ತೇಜಸ್ವಿ ಸೂರ್ಯ ಅವರು ಭರತನಾಟ್ಯ ಕಲಾವಿದೆ ಶಿವಶ್ರೀ ಸ್ಕಂದ ಪ್ರಸಾದ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಾಳೆ ಪ್ಯಾಲೇಸ್ ಗ್ರೌಂಡ್ ಗಾಯತ್ರಿ ವಿಹಾರ್ ಮೈದಾನದಲ್ಲಿ ಔತಣಕೂಟ ನಡೆಯಲಿದೆ. ಕೇಂದ್ರ ಸರ್ಕಾರದ ರಾಜಕೀಯ ಗಣ್ಯರು ಭಾಗಿಯಾಗುವ ನಿರೀಕ್ಷೆ ಇದೆ.
ನವ ವಧುವಿನ ಹಿನ್ನೆಲೆ ಏನು ಗೊತ್ತಾ...?
ಶಿವಶ್ರೀ ಸ್ಕಂದ ಪ್ರಸಾದ್ ಅವರು ಶಾಸ್ತ್ರ ವಿಶ್ವವಿದ್ಯಾನಿಲಯದಿಂದ ಜೈವಿಕ ಇಂಜಿನಿಯರಿಂಗ್ ನಲ್ಲಿ ಬಿ.ಟೆಕ್ ಪದವಿಯನ್ನು ಪಡೆದುಕೊಂಡಿದ್ದಾರೆ. ಚೆನ್ನೈ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂ.ಎ ಮತ್ತು ಸಂಸ್ಕೃತದಲ್ಲಿ ಎಂ.ಎ ಪದವಿ ಪಡೆದುಕೊಂಡಿದ್ದಾರೆ. ಹಾಡು, ನೃತ್ಯದ ಜೊತೆಗೆ ಸೈಕ್ಲಿಂಗ್ ಚಾರಣದಲ್ಲಿ ಕೂಡಾ ಆಸಕ್ತಿ ಹೊಂದಿದ್ದಾರೆ.