ಕ್ಷಮಿಸಮ್ಮಾ....ನಾನು ಸತ್ತ ಕಾರಣ ಯಾರಿಗೂ ತಿಳಿಸ್ಬೇಡ ಪ್ಲೀಸ್'...! - ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾರಣ ಏನ್ ಗೊತ್ತಾ...!!?

  • 08 Mar 2025 03:50:14 PM

ಆಂಧ್ರ ಪ್ರದೇಶ: ಇತ್ತೀಚಿನ ದಿನಗಳಲ್ಲಿ ಶಾಲೆ-ಕಾಲೇಜು ಕಲಿಯುವ ಮಕ್ಕಳಿಗೆ ಅದೇನಾಗಿದೆಯೋ ಗೊತ್ತಿಲ್ಲ. ಕ್ಷುಲ್ಲಕ ವಿಷಯಗಳಿಗೆ ಮಾನಸಿಕ ಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ತೆಗೆದುಕೊಳ್ಳುವ ಹಂತಕ್ಕೆ ಬಂದು ಬಿಡುತ್ತಾರೆ. ಇತ್ತೀಚೆಗೆ ಮನೋದೌರ್ಬಲ್ಯ ಹೆಚ್ಚಾಗಿ ಯುವಜನತೆಯಲ್ಲಿ ಕಾಡುತ್ತಿದೆ. ಅಪ್ರಾಪ್ತರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗಿದೆ.

 

ಇದ್ದಕಿದ್ದಂತೆ ನೇಣಿಗೆ ಶರಣಾಗಿ ಜೀವಾಂತ್ಯಗೊಳಿಸಿದ ವಿದ್ಯಾರ್ಥಿನಿ..!

 

ಪಿಯುಸಿ ವಿದ್ಯಾರ್ಥಿನಿಯೋರ್ವಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರಪ್ರದೇಶದ ಕೊನವಾನಿಪಲೆಂ ಗ್ರಾಮದಲ್ಲಿ ನಡೆದಿದೆ. ಹದಿನೇಳು ವರ್ಷದ ಜನಪ್ರಿಯಾ ಮೃತ ದುರ್ದೈವಿಯಾಗಿದ್ದಾಳೆ. ಈಕೆ ಟುನಿ ಚೈತನ್ಯ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಬುಧವಾರ ಇಂಗ್ಲೀಷ್ ಪರೀಕ್ಷೆ ಬರೆದಿದ್ದಳು. ನಂತರ ಅದೇನು ಕಾರಣಕ್ಕೆ ಗೊತ್ತಿಲ್ಲ. ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಆಕೆಯ ಪೋಷಕರು ಮರುದಿನ ಒಂದು ಕಾರ್ಯಕ್ರಮಕ್ಕೆ ಹೋಗಿದ್ದರು. ಇದೇ ಸಂದರ್ಭವನ್ನು ಬಳಸಿಕೊಂಡ ಜನಪ್ರಿಯ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.

 

ಡೆತ್ ನೋಟ್ ನಲ್ಲಿ ಏನಿದೆ ಗೊತ್ತಾ...?

 

ಅಪ್ಪ- ಅಮ್ಮ ಸ್ಸಾರಿ...ನನ್ನ ದಯವಿಟ್ಟು ಕ್ಷಮಿಸಿಬಿಡಿ. ನನ್ನ ಸಾವಿಗೆ ನನ್ನ ಆರೋಗ್ಯವೇ ಕಾರಣ. ನನಗೆ ಈ ನೋವನ್ನು ಸಹಿಸಲಾಗುತ್ತಿರಲಿಲ್ಲ. ಈ ನೋವಿನಿಂದ ನನಗೆ ಯಾವುದರ ಮೇಲೂ ಗಮನಹರಿಸಲು ಆಗುತ್ತಿರಲಿಲ್ಲ. ನನ್ನ ಕನಸನ್ನು ನನಸಾಗಿಸಲು ಸಾಧ್ಯವಿಲ್ಲ ಎಂದೆನಿಸಿತು. ನಾನು ಸತ್ತ ಕಾರಣವನ್ನು ಯಾರಿಗೂ ತಿಳಿಸ್ಬೇಡ ಅಮ್ಮಾ...ನಾನು ಇನ್ನು ಜೀವಂತವಾಗಿರುವುದರಲ್ಲಿ ಅರ್ಥವಿಲ್ಲ.

 

ಸಹೋದರ ಚರಣ್ ಪುಟ್ಟ ಚೆನ್ನಾಗಿರು..ನಾನು ನಿನ್ನನ್ನು ತುಂಬಾ ಪ್ರೀತಿಸ್ತೇನೆ. ಅಮ್ಮನಾ ಚೆನ್ನಾಗಿ ನೋಡಿಕೋ. ಅಪ್ಪನ ಮಾತು ಕೇಳು. ನನಗೆ ತುಂಬಾ ದುಃಖವಾಗುತ್ತಿದೆ ಎಂದು ಬರೆದಿಟ್ಟು ಜೀವಾಂತ್ಯಗೊಳಿಸಿದ್ದಾಳೆ. ಈಕೆಯ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.