ಉಳ್ಳಾಲದಲ್ಲಿ ನಸೀರ್ ಮತ್ತು ಅವನ ಹೆಂಡತಿ ಆಸ್ಮ ಸೇರಿ ಗಾಂಜಾ ಮಾರಾಟ : 10 ಲಕ್ಷ ರೂ. ಮೌಲ್ಯದ ಮಾದಕ ವಸ್ತು ವಶ!

  • 31 Oct 2024 04:37:48 PM


ಉಳ್ಳಾಲ: ಕೀನ್ಯ ಗ್ರಾಮದ ರಹ್ಮತ್ ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ದಂಪತಿಯನ್ನು ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿ ಬಂಧಿಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


 ನಝೀರ್ ಮತ್ತು ಆತನ ಪತ್ನಿ ಅಸ್ಮ ಆರೋಪಿಗಳೆಂದು ಗುರುತಿಸಲಾಗಿದೆ. ಮಾಹಿತಿ ಪ್ರಕಾರ, ಅವರು ತಮ್ಮ ಕಾರಿನಲ್ಲಿ 6.800 ಕೆಜಿ ಗಾಂಜಾವನ್ನಿಟ್ಟುಕೊಂಡು , ಮಾರಾಟ ಮಾಡಲು ಯತ್ನಿಸುತ್ತಿದ್ದರು.

ಪೊಲೀಸರು ಈ ದಂಪತಿಗಳ ಮನೆಯಿಂದ ಹಾಗೂ ಕಾರಿನಿಂದ ಗಾಂಜಾ ವಶಪಡಿಸಿಕೊಂಡಿದ್ದು, ಈ ಮಾದಕ ವಸ್ತುಗಳ ಮೌಲ್ಯವು ಸುಮಾರು 10 ಲಕ್ಷ ರೂ.ನಷ್ಟು ಇದೆ ಎಂದು ಅಂದಾಜಿಸಲಾಗಿದೆ. ವಾಸ್ತವವಾಗಿ, ಈ ದಂಪತಿಗಳು ಹೊರಗಿನಿಂದ ಬಂದು ಬಾಡಿಗೆಗೆ ವಾಸವಾಗಿದ್ದಾರೆಂದು  ತನಿಖೆಯಿಂದ ತಿಳಿದುಬಂದಿದೆ.