ಅನುದಾನವೆಲ್ಲ ಮುಸ್ಲಿಂ, ಕ್ರಿಶ್ಚಿಯನ್ನರಿಗೆ ಕೊಟ್ರೆ ಹಿಂದೂಗಳು ಏನಕ್ಕೆ...? ಬರೀ ಟ್ಯಾಕ್ಸ್ ಕಟ್ಟೋಕೆ ಮಾತ್ರನಾ...?!- ಬಿಜೆಪಿ ಕಾರ್ಯಕರ್ತರ ಬುಗಿಲೆದ್ದ ಆಕ್ರೋಶ....!

  • 08 Mar 2025 04:02:27 PM

ಬೆಂಗಳೂರು:ಕರ್ನಾಟಕದಲ್ಲಿ ಜಾತಿ ರಾಜಕಾರಣ ಹೆಚ್ಚಾಗಿ ನಡೆಯುತ್ತದೆ. ಕಾಂಗ್ರೆಸ್ಸಿಗರು ಅಧಿಕಾರದ ಗದ್ದುಗೆಯೇರಲು ಅನೇಕ ರೀತಿಯಲ್ಲಿ ಹರಸಾಹಸ ಪಟ್ಟಿದ್ದಾರೆ‌. ಕಾಂಗ್ರೆಸ್ ರಾಜಕೀಯದ ಉದ್ದೇಶಕ್ಕೆ ಮುಸ್ಲಿಮರ ಓಲೈಕೆ ಮಾಡುತ್ತಿದೆ. ಇದಕ್ಕೆ ಸಿಎಂ ಸಿದ್ಧರಾಮಯ್ಯನವರೇ ಸಾರಥಿ. ಮುಸ್ಲಿಮರ ಓಟು ಇಲ್ಲವಾದಲ್ಲಿ ಕಾಂಗ್ರೆಸ್ ಶೂನ್ಯ ಎಂದು ಅದಾಗಿಯೇ ಒಪ್ಪಿಕೊಂಡಿದೆ. ರಾಜಕೀಯ ಅಭಿವೃದ್ಧಿಗಾಗಿ ಬೇರೊಂದು ಧರ್ಮದ ಓಲೈಕೆ, ಅವರಿಗಾಗಿ ಕೆಲಸ ಮಾಡೋದು ಕೂಡಾ ಕಾಂಗ್ರೆಸ್ ಗೆ ಅನಿವಾರ್ಯ. ಇದೀಗ ಅದನ್ನು ಮತ್ತೆ ಬಜೆಟ್ ಮಂಡನೆಯಲ್ಲೂ ಸಾಬೀತುಪಡಿಸಿಕೊಂಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಬಜೆಟ್ ವಿಚಾರವಾಗಿ ಸಿಎಂ ಸಿದ್ಧು ವಿರುದ್ಧ ಗರಂ ಆದ ಬಿಜೆಪಿಗರು....!!

 

ಸಿಎಂ ಸಿದ್ಧರಾಮಯ್ಯನವರು ಈ ಸಾಲಿನ ಬಜೆಟ್ ನಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ಜೈನರು ಸೇರಿದಂತೆ ಇತರ ಸಮುದಾಯಗಳಿಗೆ ಪ್ರತ್ಯೇಕವಾಗಿ ಬಜೆಟ್ ಮಂಡನೆ ಮಾಡಿದ್ದಾರೆ. ಆದರೆ ಹಿಂದೂಗಳಿಗೆ ಮಾತ್ರ ಮಾಡಿಲ್ಲ. ಹಿಂದೂಗಳು ಇವರಿಗೇನು ಮಾಡಿದ್ದಾರೆ..

 

ಕಣ್ಣು ಕಿತ್ತಿದಾರಾ...? ಅವರೇನು ಟ್ಯಾಕ್ಸ್ ಕಟ್ಟಲು ಮಾತ್ರ ಸೀಮಿತನಾ...? ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ‌. ಸಿಎಂ ಸಿದ್ಧರಾಮಯ್ಯ ಅವರ ತಾರತಮ್ಯ ನೀತಿಗೆ ಜನರು ಕೆಂಡಾಮಂಡಲರಾಗಿದ್ದಾರೆ. ಇಂತಹ ವ್ಯವಸ್ಥೆ ಇದ್ದರೆ ರಾಜ್ಯ ಪ್ರಗತಿಯಾಗದು. ಜನಸಾಮಾನ್ಯರ ಬದುಕೂ ಅಭಿವೃದ್ಧಿಯಾಗದು ಎಂದು ಜನತೆ ಅಭಿಪ್ರಾಯ ಪಟ್ಟಿದ್ದಾರೆ. 

 

ಓಟು ಹಾಕೋಕೆ ಹಿಂದೂಗಳು ಬೇಕು....ಅನುದಾನ ಮಾತ್ರ ಇಲ್ವಾ...!!?

 

ಮುಸ್ಲಿಮರ ಸ್ಮಶಾನ, ವಕ್ಫ್ ಆಸ್ತಿ ರಕ್ಷಣೆಗೆ 150 ಕೋಟಿ ರೂ, ಕ್ರಿಶ್ಚಿಯನ್ನರ ಅಭಿವೃದ್ಧಿಗೆ 250 ಕೋಟಿ ರೂ., ಜೈನ, ಬೌದ್ಧ ಮತ್ತು ಸಿಖ್ ಸಮುದಾಯದ ಅಭಿವೃದ್ಧಿಗೆ 100 ಕೋಟಿ ರೂ ಘೋಷಣೆ ಮಾಡಲಾಗಿದೆ. ಹಿಂದೂಗಳಿಗೆ ಮಾತ್ರ ಹೀಗೆ ಪ್ರತ್ಯೇಕ ಅನುದಾನ ನೀಡಿಲ್ಲ. ಇವರಿಗೆ ಓಟು ಹಾಕಲು ಹಿಂದೂಗಳು ಬೇಕು. ಆದರೆ ಅನುದಾನ ಕೊಡಲು ಯಾಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.