ಮಂಗಳೂರು: ಬಜಪೆ ಸಮೀಪದ ನೆಲ್ಲಿದಡಿ ಗುತ್ತುವಿನ ಭೂಮಿ ರಕ್ಷಣೆಯ ಕುರಿತಾಗಿ ಹಿಂದು ಜಾಗರಣ ವೇದಿಕೆ ಸುರತ್ಕಲ್ ನ ಪ್ರಮುಖರು ಗುತ್ತುವಿನ ಮನೆಯವರೊಂದಿಗೆ ಚರ್ಚೆ ನಡೆಸಿ, ಈ ಭಾಗದ ಭೂಸಂರಕ್ಷಣೆಯ ಬಗ್ಗೆ ಹಿಂದಿನ ದಿನಗಳಲ್ಲಿ ಹಿಂಜಾವೇ ಹತ್ತಾರು ಹೋರಾಟ ನಡೆಸಿ ಯಶಸ್ಸು ಕಂಡಿತ್ತು.
ಪ್ರಸ್ತುತ, ಈ ಹೋರಾಟಕ್ಕೆ ಹಿಂಜಾವೇ ಸುರತ್ಕಲ್ ಮತ್ತು ಕಾಟಿಪಳ್ಳದ ಕಾರ್ಯಕರ್ತರು ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಸಮಾಜದೊಂದಿಗೆ ಧರ್ಮ ಸಂರಕ್ಷಣೆಯ ಕಾರ್ಯದಲ್ಲಿ ಹಿಂದು ಜಾಗರಣ ವೇದಿಕೆ ನಿರಂತರವಾಗಿ ಪಾಲ್ಗೊಳ್ಳಲಿದೆ ಎಂದು ತಿಳಿಸಿದೆ.
ಹಿಂದು ಜಾಗರಣ ವೇದಿಕೆ, ಸುರತ್ಕಲ್ & ಕಾಟಿಪಳ್ಳ ನಗರ