ಸುರತ್ಕಲ್: ಹಿಂದೂ ಮಹಾಸಭಾ ಕರ್ನಾಟಕ ಘಟಕದ ಅಧ್ಯಕ್ಷರಾದ ಡಾ. ಎಲ್.ಕೆ. ಸುವರ್ಣ ಅವರು ಶ್ರೀ ನೆಲ್ಲಿದಡಿ ಗುತ್ತು ಕಾಂತೇರಿ ಜುಮಾದಿ ದೈವಸ್ಥಾನಕ್ಕೆ ಭೇಟಿ ನೀಡಿದರು. ಇವರಿಗೆ ಇಲ್ಲಿನ ದೈವದ ಸೇವಕರಾದ ಹಿರಿಯ ಚೌಟರು ಜುಮಾದಿ ದೈವದ ಗಂಧ ಪ್ರಸಾದವನ್ನು ನೀಡಿ ಗೌರವಿಸಿದರು. ಈ ಸಂದರ್ಭದ ದಲ್ಲಿ MSEZ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆಯ ಕುರಿತು ವಿವರವಾಗಿ ತಿಳಿಸಿದರು.
ಮಾರ್ಚ್ 18, 2025 ರಂದು ನಡೆಯಲಿರುವ ಬಜ್ಪೆ ಶಕ್ತಿ ಮಂಟಪದಿಂದ ನೆಲ್ಲಿದಡಿ ಗುತ್ತುವರೆಗಿನ ಪಾದಯಾತ್ರೆಗೆ ಹಿಂದೂ ಮಹಾಸಭೆಯು ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಡಾ. ಎಲ್.ಕೆ. ಸುವರ್ಣ ಹೇಳಿದ್ದಾರೆ. ಇದು ನಮ್ಮ ಕರ್ತವ್ಯವೆಂದೂ ಹಿಂದೂ ಸಮಾಜವು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಗೆ ಭಾಗವಹಿಸಬೇಕೆಂದು ಪತ್ರಿಕಾ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಖಜಾಂಚಿ ಲೋಕೇಶ್ ಉಳ್ಳಾಲ್, ಪ್ರಮೋದ್ ಉಚ್ಚಿಲ್, ಜಯಕುಮಾರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.