ಮಂಗಳೂರು: ಸೌಜನ್ಯ ಹತ್ಯೆ ಪ್ರಕರಣದ ಕುರಿತು Samir MD ವೀಡಿಯೋ: ವ್ಯಾಪಕ ಆಕ್ರೋಶ, ಯಕ್ಷಪ್ರಶ್ನೆ ಎತ್ತಿದ ಹಿಂದೂ ಕಾರ್ಯಕರ್ತರು! ಹಿಂದೂ ದೇವಸ್ಥಾನಗಳ ವಿಷಯಕ್ಕೆ ಬಂದರೆ ಜಾಗೃತೆ! ಆದರೆ ಇದೊಂದು ಪ್ರಶ್ನೆ?? ಪುತ್ತೂರಿನ ಸೌಮ್ಯಾ ಭಟ್ ನಂತಹ ಹಲವಾರು ಹಿಂದೂ ಹೆಣ್ಣುಮಕ್ಕಳನ್ನು ಅತ್ಯಾಚಾರವೆಸಗಿ ತುಂಡು-ತುಂಡಾಗಿ ಕತ್ತರಿಸಿದ Samir MD ಅವರ ಸಮುದಾಯದ ಕಠೋರರ ಬಗ್ಗೆ ಯಾಕೆ ವೀಡಿಯೋ ಅಪ್ಲೋಡ್ ಮಾಡಲಾಗುತ್ತಿಲ್ಲ? ಎಂದು ಕಿಡಿ ಕಾರಿದ ಹಿಂದೂ ಕಾರ್ಯಕರ್ತರು!

  • 09 Mar 2025 07:54:24 PM

ಅನ್ಯಮತೀಯ ಅದೆಷ್ಟೋ ಕಾಮಾಂದರು ಹಿಂದೂ ಹೆಣ್ಣು ಮಕ್ಕಳನ್ನು ಈ ವರೆಗೂ ಅತಿ ಭೀಕರವಾಗಿ ಅತ್ಯಾಚಾರ ಮಾಡಿ ಹತ್ಯೆಗೈದಿದ್ದಾರೆ, ಹತ್ಯೆಗೈಯುತ್ತಲೂ ಇದ್ದಾರೆ. ಆದರೆ ಇದ್ಯಾವುದರ ಬಗ್ಗೆಯೂ ಯೋಚೆನೆ ಮಾಡದೇ,

 

ಘಟನೆಯಾದಾಗ ಒಂದು ಸ್ಟೇಟಸ್ ಹಾಕಿ ಸುಮ್ಮನಾಗುವ. ಹಿಂದೂಗಳೆಲ್ಲ ಸಮೀರ್ ಎನ್ನುವ ಯೂಟ್ಯೂಬ್ ಸ್ಟಾರ್ ಸೌಜನ್ಯ ಬಗ್ಗೆ ಮಾಡಿರುವ ಒಂದೇ ಒಂದು ವಿಡಿಯೋದಿಂದ ಮೈಮೇಲೆ ದೇವರು ಬಂದಂತೆ ಆಡುತ್ತಿದ್ದಾರೆ.

 

ಆದರೆ ಅನ್ಯಮತೀಯರು ಮಾಡಿದ ಇದಕ್ಕೂ ಮೀರಿದ ಭೀಭತ್ಸ ಪ್ರಕರಣಗಳ ಬಗ್ಗೆ ನಿಮಗೆ ಗೊತ್ತಾ?

 

ವೈರಲ್ ವಿಡಿಯೋ ಹಿಂದೆ ಹುಚ್ಚರಂತೆ ಓಡುವ ಮುನ್ನ!

 

ಸಮೀರ್ ಎಂಬಾತ ಸೌಜನ್ಯ ಅತ್ಯಾಚಾರ ಪ್ರಕರಣದ ಬಗ್ಗೆ ಮಾಡಿರುವ ವಿಡಿಯೋ‌‌ ಸದ್ಯ ದೇಶದಾದ್ಯಂತ ಸಂಚಲನ ಸೃಷ್ಟಿಸಿದೆ. 1 ಕೋಟಿಗೂ ಹೆಚ್ಚು ವೀಕ್ಷಣೆ ಕಂಡು ಟ್ರೆಂಡಿಂಗ್ ನಲ್ಲಿದೆ. ಆದರೆ ಸಮೀರ್ ಯಾಕೆ ಸೌಜನ್ಯಾಳ ಬಗ್ಗೆ ಮಾತ್ರ ಮಾತನಾಡಿದ?.

 

ದೇಶದಲ್ಲಿ ಸೌಜನ್ಯಾ ಪ್ರಕರಣಕ್ಕಿಂತ ಭೀಭತ್ಸ ಪ್ರಕರಣಗಳು ಹಿಂದೂಗಳ ಮೇಲೆ ಅನ್ಯಮತೀಯರಿಂದ ನಡೆದಿದೆ. ಅದೆಷ್ಟೋ ಅಮಾಯಕ ಹೆಣ್ಣು ಮಕ್ಕಳು ಅನ್ಯಮತೀಯ ರಾಕ್ಷಸರ ಕೈಯಲ್ಲಿ ಸಿಕ್ಕಿ ಹೆಣವಾಗಿದ್ದಾರೆ.

 

75% ದಷ್ಟು ಪ್ರಕರಣಗಳು ಮುಚ್ಚಿ ಹೋಗಿವೆ. ಆದರೂ ಹಿಂದೂಗಳ್ಯಾರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕಾರಣ ಇದ್ಯಾವುದೂ ಟ್ರೆಂಡಿಂಗ್ ನಲ್ಲಿಲ್ಲ.

 

ಹಿಂದೂ‌ ಪುಣ್ಯಕ್ಷೇತ್ರದ ಮಾನ ಹರಾಜಿನ ಪ್ಲಾನ್!

 

ಸದ್ಯ,ಸಮೀರ್ ಮಾಡಿರುವ ವಿಡಿಯೋದಲ್ಲಿ ಧರ್ಮಸ್ಥಳ ಪುಣ್ಯಕ್ಷೇತ್ರದ ಬಗ್ಗೆ ಹಲವು ಬಾರಿ ಉಲ್ಲೇಖಿಸಿದ್ದಾನೆ‌. ಸೌಜನ್ಯಾಳಿಗೆ ನ್ಯಾಯ ಸಿಕ್ಕಿಲ್ಲ ಎಂಬೂದು ಎಲ್ಲರಿಗೂ ಇರುವ ಕೊರಗು ಆದರೆ ಹಿಂದೂ ಧರ್ಮದ ಪ್ರಮುಖ ಧಾರ್ಮಿಕ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವ ಪ್ಲಾನ್ ಅನ್ಯಮತೀಯ ಗುಂಪಿನಲ್ಲಿ‌ ನಡೆಯುತ್ತಿದೆ ಎಂಬ ಗಂಭೀರ ವಿಚಾರವನ್ನು ಅಲ್ಲಗಳೆಯುವಂತಿಲ್ಲ. ಸಮೀರ್ ಕೂಡ ಇದರಿಂದ‌ ಹೊರತು ಎಂದು‌ ಹೇಳ ಬರುವುದಿಲ್ಲ.

 

ಸಮೀರ್ ರೀತಿಯಲ್ಲಿ ಕೆಲವಾರು ಅನ್ಯಮತೀಯ ಯೂಟ್ಯೂಬ್ ಚಾನೆಲ್, ಪತ್ರಿಕೆ, ಟಿವಿ ಚಾನೆಲ್‌ಗಳು ಹಿಂದೂ ಧಾರ್ಮಿಕ‌ ಕ್ಷೇತ್ರಗಳ ಬಗ್ಗೆ ಈ ಹಿಂದೆಯೂ ಅಪಪ್ರಚಾರಗಳನ್ನು ಮಾಡಿದ್ದಾರೆ.

 

ಈ‌ ಪ್ರಕರಣಗಳ ಬಗ್ಗೆ ಯಾಕೆ ಸಮೀರ್ ತುಟಿ ಬಿಚ್ಚಿಲ್ಲ!

 

ಸದ್ಯ ಸೌಜನ್ಯಾ ಪ್ರಕರಣದಿಂದ ಟ್ರೆಂಡಿಂಗ್ ನಲ್ಲಿರುವ ಸಮೀರ್ ಯಾಕಾಗಿ ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾ ಪ್ರಕರಣದ ಬಗ್ಗೆ ಮಾತ್ರ ಮಾತನಾಡಿದ?.

 

ಪುತ್ತೂರುನಲ್ಲಿ ಸೌಮ್ಯಾ ಭಟ್ ಎನ್ನುವ ಯುವತಿಯನ್ನು ಮಿಲಿಟರಿ ಅಶ್ರಾಫ್ ಎಂಬಾತ ಭೀಕರವಾಗಿ ಅತ್ಯಾಚಾರ ಮಾಡಿ ಕೊಂದ, ಅಫ್ತಾಬ್ ಎಂಬ ಕ್ರೂರಿ ಶ್ರದ್ಧಾ ಎಂಬ ಯುವತಿಯನ್ನು ತುಂಡು ತುಂಡಾಗಿ ಕತ್ತರಿಸಿದ, ನಮ್ಮದೇ ರಾಜ್ಯದಲ್ಲಿ ಫಯಾಝ್ ಎಂಬಾತ ನೇಹಾಳನ್ನು ಇರಿದು ಕೊಂದ,

 

ಬೆಂಗಳೂರಿನಲ್ಲಿ‌ ಮಹಾಲಕ್ಷ್ಮಿ ಎಂಬಾಕೆಯನ್ನು ಅಶ್ರಫ್ ಭೀಕರವಾಗಿ ಕೊಂದ, ಅಯೋಧ್ಯೆ ರಾಮಮಂದಿರಕ್ಕೆ ಮೊನ್ನೆಯಷ್ಟೇ ಅಬ್ದುಲ್ ರೆಹಮಾನ್ ಎಂಬಾತ ಬಾಂಬ್ ಇಡಲು ಸಂಚು ರೂಪಿಸಿ ಸಿಕ್ಕಿಬಿದ್ದ.‌ಹೀಗೆ‌ ಹೇಳುತ್ತಾ ಹೋದರೆ ಹಿಂದೂ ಧರ್ಮದ ಮೇಲೆ ಅನ್ಯಮತೀಯರು ಮಾಡಿದ ಕ್ರೌರ್ಯ ಒಂದೆರಡಲ್ಲ.

 

ಆದರೆ ಮೂರ್ಖರಂತಿರುವ ಹಿಂದೂಗಳಾದ ನಾವು ಮೊಹಮ್ಮದ್ ಸಮೀರ್ ಆತನ ಧರ್ಮದ ರಾಕ್ಷಸರು ಮಾಡಿದ ಈ ಯಾವ ಘಟನೆಯ ಬಗ್ಗೆಯೂ ತುಟಿ ಬಿಚ್ಚದಿದ್ದರೂ ಕೂಡ ಕೇವಲ ಆತ ಸೌಜನ್ಯಾಳ‌ ಬಗ್ಗೆ ಮಾಡಿದ ಒಂದೇ ಒಂದು ವಿಡಿಯೋ ನೋಡಿ ಹುಚ್ಚರಂತೆ ಆತನ ಹಿಂದೆ ಓಡುತ್ತಾ, ಆತನಿಗೆ ಬೆಂಬಲ ನೀಡುತ್ತಿದ್ದೇವೆ.

 

ಸೌಜನ್ಯಾಳ ಸಾವಿಗೆ ನ್ಯಾಯ ಸಿಗಲೇ ಬೇಕು, ಆದರೆ ಹಿಂದೂ ಧರ್ಮವನ್ನು ಕೇವಲವಾಗಿ ಕಾಣುವ ಕ್ರಿಮಿಗಳಿಂದ ಅದು ಸಾಧ್ಯ ಎನ್ನುವ ಭ್ರಮೆಯಿಂದ ನಾವು ಮೊದಲು‌ ಹೊರ ಬರೋಣ.

 

ಮೊಹಮ್ಮದ್ ಸಮೀರ್ ಒಬ್ಬ ನಿಜವಾದ ನ್ಯಾಯ ಪರ ಹೋರಾಟಗಾರನಾದರೆ ಆತ ಆತನದೇ ಧರ್ಮಿಯರು ಮಾಡಿದ ಕ್ರೌರ್ಯದ ಬಗ್ಗೆ ಮೊದಲು ಮಾತನಾಡಲಿ ಆ ಬಳಿಕ ಆತನ ಬಗ್ಗೆ ಪ್ರೀತಿ, ವಾತ್ಸಲ್ಯ, ಸೋದರತ್ವ ತೋರಿಸೋಣ. 

ಅದಕ್ಕಿಂತ ಮೊದಲು ಒಬ್ಬ ಹಿಂದೂವಾಗಿ ಎಚ್ಚೆತ್ತುಕೊಂಡು ಪ್ರಜ್ಞಾವಂತರಾಗೋಣ ಎಂದು ಕರಾವಳಿಯ ಹಿಂದು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಹಾಗೂ ಹಿಂದೂ ದೇವಾಲಯಗಳ ವಿಚಾರಕ್ಕೆ ಬಂದರೆ ಜಾಗೃತೆ ಎಂದು ಎಚ್ಚರಿಕೆ ನೀಡಿದ್ದಾರೆ.