ಶಿರ್ತಾಡಿ|ಸೇತುವೆ ಬಳಿಯಲ್ಲೇ ಸ್ಕೂಟರ್ ಗೆ ಗುದ್ದಿದ ಕಾರು...!! ದಾರುಣ ಅಂತ್ಯ ಕಂಡ ಊರಿನ ಪ್ರೀತಿಯ ಶಿಕ್ಷಕಿ...!!

  • 10 Mar 2025 11:17:46 AM

ಶಿರ್ತಾಡಿ : ಅತೀ ವೇಗದ ಚಾಲನೆ ದುರಂತಗಳನ್ನು ಆಹ್ವಾನಿಸುತ್ತದೆ ಎಂಬ ಸತ್ಯ ಗೊತ್ತಿದ್ದರೂ ವಾಹನ ಸವಾರರು ರಸ್ತೆ ನಿಯಮ ಮೀರಿ ಕೆಲವೊಂದು ಅವಾಂತರಗಳನ್ನು ಮಾಡಿಕೊಳ್ಳುತ್ತಾರೆ. ಇತ್ತೀಚೆಗಂತೂ ಅನೇಕ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ಮೂಡುಬಿದಿರೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಊರಿನ ನೆಚ್ಚಿನ ಶಿಕ್ಷಕಿಯೋರ್ವರು ಅಸುನೀಗಿದ್ದಾರೆ. 

 

ಸ್ಪೀಡಲ್ಲಿ ಬಂದು ಸ್ಕೂಟರ್ ಗೆ ಗುದ್ದಿದ ಕಾರು, ಸವಾರೆ ಸ್ಪಾಟ್ ಡೆತ್....!!

 

ಕಾರೊಂದು ಸ್ಕೂಟರ್ ಗೆ ಢಿಕ್ಕಿಯಾದ ಪರಿಣಾಮ ಸವಾರೆ, ಶಿಕ್ಷಕಿಯೋರ್ವರು ಮೃತಪಟ್ಟ ದಾರುಣ ಘಟನೆ ಮೂಡುಬಿದ್ರಿ ರಾಜ್ಯ ಹೆದ್ದಾರಿಯ ಶಿರ್ತಾಡಿ ಸೇತುವೆ ಬಳಿಯಲ್ಲಿ ನಡೆದಿದೆ. ಮೂಡುಬಿದ್ರಿ ನಾಗರಕಟ್ಟೆ ನಿವಾಸಿ, ಶಿರ್ತಾಡಿ ಹೋಲಿ ಏಂಜಲ್ಸ್ ಖಾಸಗಿ ಶಾಲೆಯ ಶಿಕ್ಷಕಿ ಸುಜಯ ಭಂಡಾರಿ ಮೃತ ದುರ್ದೈವಿ.

 

ಇವರು ಶುಕ್ರವಾರ ಸಂಜೆ ಹೊತ್ತಲ್ಲಿ ಶಾಲೆ ಮುಗಿಸಿ ತನ್ನ ಆಕ್ಟೀವಾದಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ಈ ಸಂದರ್ಭ ದುರಂತವೊಂದು ಸಂಭವಿಸಿದೆ. ಶಾಲೆಯಲ್ಲಿ ಪ್ರೀತಿಯ ಶಿಕ್ಷಕಿಯನ್ನು ಕಳೆದುಕೊಂಡ ವಿದ್ಯಾರ್ಥಿಗಳು ಸಂತಾಪವನ್ನು ಸೂಚಿಸಿದ್ದಾರೆ. ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 

ನಡೆದ ಘಟನೆ ಏನು..?

 

ಇವರು ಸ್ಕೂಟಿಯಲ್ಲಿ ಮನೆಗೆ ಹೋಗುತ್ತಿದ್ದಾಗ ಶಿರ್ತಾಡಿ ಸೇತುವೆಯ ಬಳಿ ಎದುರುಗಡೆಯಿಂದ ಅತೀ ವೇಗವಾಗಿ ಬಂದ ಕಾರು ಏಕಾಏಕಿ ದಿಢೀರ್ ಸ್ಕೂಟರ್ ಗೆ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸವಾರೆ ದೂರ ಎಸೆಯಲ್ಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದಾರೆ. ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

 

ಮೃತ ಶಿಕ್ಷಕಿಯ ಗಂಡ ವಿದೇಶದಲ್ಲಿದ್ದು ಇಬ್ಬರು ಮಕ್ಕಳು ಮೂಡುಬಿದ್ರೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.