ದೆಹಲಿ: ಧೈರ್ಯವಿದ್ದರೆ ನನ್ನನ್ನು ಗಡಿಪಾರು ಮಾಡಿ!;ಭಾರತದಲ್ಲಿ ಬಾಂಗ್ಲಾ ಮುಸಲ್ಮಾನನ ದರ್ಪ!

  • 10 Mar 2025 04:01:58 PM

ದೆಹಲಿ: ನಾವು ಎಲ್ಲಿದ್ದರೂ ಕೂಡಾ ಹುಟ್ಟಿದ ಮಣ್ಣಿಗೆ, ನಮ್ಮನ್ನು ಬೆಳೆಸಿದ ಮಣ್ಣಿಗೆ ಸದಾ ಋಣಿಯಾಗಿರಬೇಕು ಮತ್ತು ಕೃತಜ್ಞರಾಗಿರಬೇಕು. ಭಾರತ ದೇಶದಲ್ಲಿ ಜನ್ಮ ಪಡೆದು ಇಲ್ಲಿ ಬೆಳೆದ ಅನ್ನ ತಿಂದು ಕೃತಘ್ಞನಾಗಿ ವರ್ತಿಸಿದರೂ ಅದು ದೇಶದ್ರೋಹವೇ. ಭಾರತದ ಮೇಲೆ ಶತ್ರುತ್ವ ಸಾಧಿಸುವ ದೇಶಗಳಿಗೆ, ಅವರ ದುಷ್ಕೃತ್ಯಗಳಿಗೆ ಪ್ರೇರಣೆ ನೀಡುವ ಕೆಲಸವೂ ಕೆಲವು ದೇಶದ್ರೋಹಿಗಳಿಂದ ನಡೆಯುತ್ತಿದೆ. ಅಂಥವರು ಈ ದೇಶದಲ್ಲಿ ಇರಲು ನಾಲಾಯಕ್ ಗಳು. ಇದೀಗ ಅಂತಹುದೇ ಒಂದು ವಿಚಾರ ಬಹಿರಂಗಗೊಂಡಿದೆ.

 

ಭಾರತದಲ್ಲಿದ್ದುಕೊಂಡು ತಾನು ಬಾಂಗ್ಲಾ ವಾಸಿ ಎಂದು ದರ್ಪ ತೋರಿದ ಮುಸ್ಲಿಂ ಯುವಕ..!

 

ಇವರಿಗೆ ಬದುಕಲು ಭಾರತ ಬೇಕು, ಕೆಲಸ ಮಾಡಲೂ ಇದೇ ದೇಶ ಬೇಕು. ಆದರೆ ಬಡಾಯಿ ಕೊಚ್ಚಿಕೊಳ್ಳಲು ಮಾತ್ರ ಇತರ ದೇಶ ಬೇಕು ನೋಡಿ. ಇಲ್ಲೊಬ್ಬ ಕಿರಾತಕ ತಾನು ಬಾಂಗ್ಲಾದೇಶದವನು ಎಂದು ಹೇಳಿ ದರ್ಪ ತೋರಿಸಿದ್ದಾನೆ. ನೀವು ಏನೇ ಮಾಡಿ, ಯಾರಿಗಾದರೂ ಕರೆ ಮಾಡಿ...ನಾನು ಹೆದರೋದಿಲ್ಲ. ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಅಹಂಕಾರದಿಂದ ವರ್ತಿಸಿದ್ದಾನೆ. ಮಾಧ್ಯಮದವರ ಜೊತೆ ಈ ರೀತಿ ಮಾತನಾಡಿದ್ದು ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ‌. 

 

ವೈರಲ್ ವೀಡಿಯೋದಲ್ಲಿ ಏನಿದೆ..?

 

ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಒಂದು ವೈರಲ್ ಆಗಿದ್ದು ಅದು ದೆಹಲಿಯಲ್ಲಿ ನಡೆದದ್ದು ಎಂದು ತಿಳಿದುಬಂದಿದೆ. ಈ ವೀಡಿಯೋದಲ್ಲಿ ಒಬ್ಬ ವ್ಯಕ್ತಿ ಮಾಧ್ಯಮದ ಕ್ಯಾಮೆರಾ ಮುಂದೆ ಬಹಿರಂಗವಾಗಿ ತಾನು ಬಾಂಗ್ಲಾ ದೇಶಿ ಎಂದು ಹೇಳಿಕೊಳ್ಳುವುದನ್ನು ಕಾಣಬಹುದು. ಒಬ್ಬ ವರದಿಗಾರ ಕೆಲವು ಜನರೊಂದಿಗೆ ಮಾತನಾಡುತ್ತಾನೆ.

 

ಆಗ ಅಲ್ಲಿದ್ದ ಯುವಕನೋರ್ವ ಹೌದು ನಾನು ಬಾಂಗ್ಲಾದೇಶಿ, ನೀವು ಧಾರಾಳವಾಗಿ ಯಾರನ್ನೂ ಬೇಕಾದರೂ ಕರೆಯಿರಿ. ಕರೆ ಮಾಡಿ..ಆದರೆ ನೀವು ಇಲ್ಲಿ ಬರೋ ಮೊದ್ಲು ನಮ್ಮ ಮೇಡಂ ಅವರಿಂದ ಪರ್ಮಿಷನ್ ಕೇಳಿದ್ದೀರಾ ಎಂದು ಪ್ರಶ್ನಿಸುತ್ತಾರೆ. ಆಗ ಒಬ್ಬ ಮಹಿಳೆ ಎಂಟ್ರಿ ಕೊಟ್ಟು ಜರ್ನಲಿಸ್ಟ್ ಗೆ ಕೋಪದಿಂದ ಬೆದರಿಕೆ ಹಾಕುತ್ತಾಳೆ. ನೀವು ಇಲ್ಲಿಗೆ ಹೇಗೆ ಬಂದ್ರಿ ಎಂದು ಪ್ರಶ್ನಿಸಿ ಕ್ಯಾಮೆರಾ ಆಫ್ ಮಾಡುವಂತೆ ತರಾಟೆಗೆ ತೆಗೆದುಕೊಳ್ಳುತ್ತಾಳೆ. ಈ ಸಂದರ್ಭ ಪತ್ರಕರ್ತರು ಕೂಡಾ ಅವರೊಂದಿಗೆ ಜಗಳಕ್ಕಿಳಿದ ಕ್ಲಿಪ್ಸ್ ಕೂಡಾ ಗಮನಿಸಬಹುದು.