ಶೇಣಿ: ಶೇಣಿ ಶ್ರೀ ಚಾಂಬ್ರಕಾನ ಧೂಮಾವತಿ ದೇವಸ್ಥಾನದ ವಾರ್ಷಿಕ ನೇಮೋತ್ಸವ ವಿಜೃಂಭಣೆಯಿಂದ ಜರಗಿತು

  • 11 Mar 2025 08:30:34 AM

ಶೇಣಿ: ಶೇಣಿ ಶ್ರೀ ಚಂಬ್ರಕಾನ ಧೂಮಾವತಿ ದೈವಸ್ಥಾನದ ವಾರ್ಷಿಕ ನೇಮೋತ್ಸವ ಮಾರ್ಚ್9 ರವಿವಾರದಂದು ವಿವಿಧ ಧಾರ್ಮಿಕ ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಭಕ್ತರ ನಮನದೊಂದಿಗೆ ದೇವಾಲಯದ ವಾತಾವರಣ ಭಕ್ತಿ-ಭಾವನೆಯಲ್ಲಿ ಮೂಡಿಬಂದಿತು.

 

ಈ ಪ್ರಯುಕ್ತ ಗುಳಿಗ ಮತ್ತು ಪರಿವಾರ ದೈವಗಳ ಕೋಲ ಹಾಗೂ ಪಡೈ, ಧೂಮಾವತಿ ಹಾಗೂ ಚಂಬ್ರಕಾನತ್ತಾಯ ಧೂಮಾವತಿ ದೈವದ ನೇಮ ಹಾಗೂ ಒಲಸರಿ ನಡೆಯಿತು. ಊರ ಮತ್ತು ಪರವೂರ ಭಕ್ತಾದಿಗಳು ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ದೈವದ ಅನುಗ್ರಹವನ್ನು ಪಡೆದರು.