ತಮಿಳುನಾಡು: ತಮಿಳುನಾಡು ಸರ್ಕಾರದ ಸಚಿವ ಉದಯನಿಧಿ ಸ್ಟಾಲಿನ್ ಅವರು ಹಿಂದೂ ಧರ್ಮದ ವಿರುದ್ಧ ಒಂದಲ್ಲ ಒಂದು ಟೀಕೆ, ಅಪಪ್ರಚಾರ, ವ್ಯಂಗ್ಯ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಹಿಂದೂ ಧರ್ಮವೆಂದರೆ ಇವರಿಗೆ ಮೈಯೆಲ್ಲ ಉರಿಯುತ್ತೆ. ಅಷ್ಟೊಂದು ರೀತಿಯಲ್ಲಿ ಸನಾತನ ಧರ್ಮವನ್ನು ವಿರೋಧಿಸುತ್ತಾರೆ. ಇದೀಗ ಅವರ ತಾಯಿ ನಡವಳಿಕೆಯು ನಿಜಕ್ಕೂ ಅಚ್ಚರಿ ತಂದಿದೆ.
ಕೊಲ್ಲೂರಿಗೆ ಭೇಟಿ ನೀಡಿದ ಸಿಎಂ ಎಂ.ಕೆ ಸ್ಟಾಲಿನ್ ಪತ್ನಿ...!
ಹೌದು. ಸನಾತನ ಧರ್ಮದ ವಿರುದ್ಧ ನಿರಂತರವಾಗಿ ರೊಚ್ಚಿಗೇಳುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ತಾಯಿ ಮತ್ತು ಎಂ.ಕೆ ಸ್ಟಾಲಿನ್ ಅವರ ಪತ್ನಿಯೂ ಆಗಿರುವ ದುರ್ಗಾ ಸ್ಟಾಲಿನ್ ಅವರು ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ತನ್ನ ಪತಿ ಮತ್ತು ಮಗ ಇಬ್ಬರೂ ಸನಾತನ ಧರ್ಮದ ವೈರಿಗಳೆಂಬಂತೆ ವರ್ತಿಸುತ್ತಿದ್ದರೂ, ಹಿಂದೂ ಧರ್ಮ ಅಸಮಾನತೆಯನ್ನು ಹುಟ್ಟುಹಾಕುತ್ತಿದೆ ಎಂದು ಆರೋಪಿಸಿದರೂ ಸ್ನೇಹಿತೆಯರ ಜೊತೆ ದೇಗುಲಕ್ಕೆ ಬಂದ ದುರ್ಗಾ ಅವರ ನಡೆಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮೂಕಾಂಬಿಕೆಗೆ ಚಿನ್ನದ ಕಿರೀಟ ಸಮರ್ಪಿಸಿದ ದುರ್ಗಾ ಸ್ಟಾಲಿನ್ ಸ್ನೇಹಿತೆ..!
ಅಪ್ಪಟ ದೈವಭಕ್ತೆಯಾಗಿ ದೇಗುಲಕ್ಕೆ ಆಗಮಿಸಿದ ದುರ್ಗಾ ಸ್ಟಾಲಿನ್ ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಇವರು ದಕ್ಷಿಣ ಭಾರತದ ವಿವಿಧ ದೇವಾಲಯಗಳಿಗೆ ಈಗಾಗಲೇ ಭೇಟಿ ನೀಡಿದ್ದಾರೆ. ಕೊಲ್ಲೂರಿನಲ್ಲೂ ಭಕ್ತಿಯಿಂದ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಪುನೀತರಾದರು. ಈ ವೇಳೆ ದುರ್ಗಾ ಅವರ ಸ್ನೇಹಿತೆ ಮೂಕಾಂಬಿಕಾ ದೇವಿಗೆ ಚಿನ್ನದ ಕಿರೀಟ ಅರ್ಪಣೆ ಮಾಡಿದ್ದಾರೆ.