ಉಳ್ಳಾಲ|ಹಿಂದೂ ಹುಡುಗರೇ ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದ್ವೆಯಾಗಿ- ಸಲಹೆ ಕೊಟ್ಟ ಪ್ರಖರ ವಾಗ್ಮಿ...!

  • 11 Mar 2025 01:09:04 PM

ಉಳ್ಳಾಲ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅನ್ಯಕೋಮಿನವರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಅಕ್ರಮ ಗೋಸಾಗಾಟ, ಲವ್ ಜಿಹಾದ್, ಮತಾಂತರದಂತಹ ದುಷ್ಕೃತ್ಯ ಗಳಲ್ಲಿ ಅವರು ಸಕ್ರಿಯರಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಹಿಂದೂಗಳು ಏನು ಮಾಡಬೇಕು ಎಂಬುದನ್ನು ಚಕ್ರವರ್ತಿ ಸೂಲಿಬೆಲೆ ಅವರು ವಿವರಿಸಿದ್ದಾರೆ.

 

ಹಿಂದೂ ಹುಡುಗರೇ, ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದ್ವೆಯಾಗಿ- ಸೂಲಿಬೆಲೆ

 

ವಿವಾಹವಾಗಲು ಹುಡುಗಿ ಸಿಗದ ಹಿಂದೂ ಹುಡುಗರು ಅನ್ಯಧರ್ಮೀಯ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಎಂದು ಚಕ್ರವರ್ತಿ ಸೂಲಿಬೆಲೆ ಅವರು ಕರೆ ನೀಡಿದ್ದಾರೆ. ಭಾನುವಾರ ವಿಶ್ವ ಹಿಂದು ಪರಿಷತ್ ವತಿಯಿಂದ ಮಂಗಳೂರಿನ ಕದ್ರಿ ಮಂಜುನಾಥ ಕ್ಷೇತ್ರದಿಂದ ಕುತ್ತಾರು ಕೊರಗಜ್ಜನ ಆದಿಕ್ಷೇತ್ರಕ್ಕೆ ನಡೆದ `ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ' ಪಾದಯಾತ್ರೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

 

ಮತಾಂತರ, ಲವ್ ಜಿಹಾದ್ ವಿಚಾರ ಬಿಟ್ಟು ಹಿಂದೂ ಧರ್ಮದಿಂದ ಮತಾಂತರ ಆದವರನ್ನು ಮತ್ತೆ ಮನೆಗೆ ಹಿಂತಿರುಗುವುದು ಹೇಗೆ ಎಂದು ನಮ್ಮ ಯುವಕರನ್ನು ತರಬೇತುಗೊಳಿಸಿ...ಈಗ ಟೆಸ್ಟ್ ಮ್ಯಾಚ್ ಗಳು ನಿಂತು ಹೋಗಿವೆ. ಇರುವ ಇಪ್ಪತ್ತು ಓವರ್ ಗಳಲ್ಲಿ ಬಡಿಯಬೇಕು. ಈ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕು. ಹಿಂದುತ್ವವನ್ನು ಗೌರವಿಸುವ ಜನಪ್ರತಿನಿಧಿಗಳು ದೇಶವನ್ನು ಆಳಿದಾಗ ಸನಾತನ ಹಿಂದೂ ಧರ್ಮ ಉಳಿಯುತ್ತದೆ ಎಂದು ಎಚ್ಚರಿಕೆ ನೀಡಿದರು.

 

ಸರ್ಕಾರವೇ ವಕ್ಫ್ ಆಸ್ತಿ ನವೀಕರಣಕ್ಕೆ ಹಣ ನೀಡಲು ಮುಂದಾಗಿರೋದು ವಿಷಾದ...!

 

ವಕ್ಫ್ ವಿರುದ್ಧ ದೇಶದೆಲ್ಲೆಡೆ ಹೋರಾಟ, ಪ್ರತಿಭಟನೆ ನಡೆಯುತ್ತಲೇ ಇದೆ. ಇದರ ನಡುವೆ ಅದಾವುದೂ ಗೊತ್ತೇ ಇಲ್ಲವೆಂಬಂತೆ ರಾಜ್ಯಸರ್ಕಾರ ವಕ್ಫ್ ಆಸ್ತಿಯ ನವೀಕರಣಕ್ಕೆ ನೂರ ಐವತ್ತು ಕೋಟಿ ರೂ ನೀಡಲು ಮುಂದಾಗಿರೋದು ವಿಷಾದನೀಯ. ಪ್ರಚೋದನೆ ನೀಡಿ ಪ್ರತ್ಯೇಕತೆಯನ್ನು ಹುಟ್ಟುಹಾಕುವ ಪ್ರಯತ್ನದಲ್ಲಿ ಸರ್ಕಾರವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.