ಮಂಗಳೂರು:ಇದು ಮೊಬೈಲ್ ಯುಗ. ಸೋಷಿಯಲ್ ಮೀಡಿಯಾ ಬಳಸದವರು ಈ ಕಾಲದಲ್ಲಿ ಯಾರೂ ಇಲ್ಲ. ಮೊಬೈಲ್ ಬಂದ ಮೇಲಂತೂ ಎಲ್ಲಾ ಕೆಲಸವೂ ಮೊಬೈಲ್ ನಲ್ಲೇ. ಅದೇ ರೀತಿ ಸೋಷಿಯಲ್ ಮೀಡಿಯಾದ ಇನ್ನೊಂದು ಮುಖದತ್ತ ಗಮನ ಕೊಡೋದಾದ್ರೆ ಕೊಲೆ ಬೆದರಿಕೆಗಳನ್ನೂ ಕೂಡಾ ಅದರಲ್ಲೇ ಹಾಕಿ ಬಿಡ್ತಾರೆ. ಇದೀಗ ಯಾವುದೋ ಅನ್ಯಧರ್ಮದ ಯುವಕ ಭಜರಂಗದಳ ಮುಖಂಡನೋರ್ವನಿಗೆ ಅವಾಜ್ ಹಾಕಿದ್ದಾನೆ.
ದಿಗಂತ್ ಪತ್ತೆಗೆ ಆಗ್ರಹಿಸಿದಕ್ಕೆ ಬಂತು ಬೆದರಿಕೆ ಮೆಸೇಜ್...!!
ಫರಂಗಿಪೇಟೆಯ ಕಿದೆಬೆಟ್ಟು ನಿವಾಸಿ ದಿಗಂತ್ ನಿಗೂಢವಾಗಿ ನಾಪತ್ತೆಯಾಗಿದ್ದ ಕಾರಣಕ್ಕೆ ಊರಿನ ಜನರು, ಹಿಂದೂ ಕಾರ್ಯಕರ್ತರು ಶೀಘ್ರವಾಗಿ ಪತ್ತೆ ಹಚ್ಚಲು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯಲ್ಲಿ ಭಜರಂಗದಳ ಮುಖಂಡ ಭರತ್ ಕುಮ್ಡೇಲ್ ಅವರು ಕೂಡಾ ಭಾಗವಹಿಸಿದ್ದರು.
ಇದೀಗ ಅವರಿಗೆ ಸಾಮಾಜಿಕ ಜಾಲತಾಣ ಮೂಲಕ ಕೊಲೆ ಬೆದರಿಕೆ ಬಂದಿದೆ. ಬ್ಯಾರಿ ರೋಯಲ್ ನವಾಬ್, ಬ್ಯಾರಿ ಟ್ರೋಲರ್, ಮಂಗಳೂರು ಕಿಂಗ್ ಎಂಬ ಹೆಸರಿನ ಪೇಜ್ ಗಳ ಮುಖೇನ ಕೊಲೆ ಬೆದರಿಕೆ ಹಾಕಲಾಗಿದೆ. ದಿಗಂತ್ ನಾಪತ್ತೆ ಹಿಂದೆ ಅನ್ಯಮತೀಯರ ಹಾಗೂ ಗಾಂಜಾ ಗ್ಯಾಂಗ್ ಕೈವಾಡವಿದೆ ಎಂದು ಆರೋಪಿಸಿ ಭರತ್ ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಏನು ಬೆದರಿಕೆ ಪೋಸ್ಟ್ ಹಾಕಲಾಗಿತ್ತು...?
ಭರತ್ ಕುಮ್ಡೇಲ್ ರಕ್ತ ಈ ಭೂಮಿಗೆ ಹರಿಸದೆ ನಮಗೆ ಸಮಾಧಾನವಿಲ್ಲ. ಶಾಂತಿಯುತವಾದ ಫರಂಗಿಪೇಟೆಯಲ್ಲಿ ಕೋಮುವಾದ ಹಬ್ಬಿಸುವ ಸಂಘ ಪರುವಾರದ ಹುನ್ನಾರ ಪ್ಲಾಪ್ ಆಯ್ತು. ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡುವ ಕೆಲಸ ಕೂಡಾ ಪೊಲೀಸ್ ಇಲಾಖೆಯ ಕಾರ್ಯದಿಂದ ಛಾನ್ಸ್ ಮಿಸ್ ಆಯ್ತು. ಪೊಲೀಸ್ ಇಲಾಖೆಗೆ ಅಭಿನಂದನೆಗಳು.
ಇನ್ನು ಇವ ಎಲ್ಲಿಯಾದರೂ ಮುಸಲ್ಮಾನರ ಹೆಸರು ಎತ್ತಿದ್ರೆ ಅದೇ ಪ್ರತಿಭಟನೆಗೆ ದಾಳಿ ಮಾಡ್ತೇವೆ. ನಮ್ಮ ಸಹೋದರ ಶಾಹಿದ್ ಅಶ್ರಫ್ ನ್ನು ನಾವು ಮರೆತ್ತಿಲ್ಲ. ಇನ್ನು ಗಲಭೆ ಉಂಟಾದ್ರೆ ನಾವು ಜವಾಬ್ದಾರರಲ್ಲ. ಎಚ್ಚರಿಕೆ. ಪ್ರತಿರೋಧ ಅಪರಾಧವಲ್ಲ ಎಂದು ಪೋಸ್ಟ್ ಮಾಡಿದ್ದಾರೆ.