ಅಮೆರಿಕಾ: ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಇದೀಗ ಟ್ರಂಪ್ ಅಧ್ಯಕ್ಷತೆಯಲ್ಲಿ ಮುನ್ನುಗ್ಗುತ್ತಿದೆ. ಟ್ರಂಪ್ ಅಧ್ಯಕ್ಷರಾದ ಕೂಡಲೇ ವಿಶ್ವದ ಹಲವು ರಾಷ್ಟಗಳು ಗಲಿಬಿಲಿಗೊಂಡಿದ್ದವು. ಹೀಗಿದ್ದರೂ ಭಾರತ ಈ ತಲೆಬಿಸಿಯಿಂದ ದೂರವಿತ್ತು ಕಾರಣ ಇತ್ತೀಚಿನ ದಿನಗಳಲ್ಲಿ ಅಮೆರಿಕ ಭಾರತದೊಂದಿಗೆ ಹೆಚ್ಚು ಸಲುಗೆಯಿಂದಿದೆ.ಆದರೆ ಇದೀಗ ಆ ಲೆಕ್ಕಾಚಾರ ಉಲ್ಟಾಪಲ್ಟಾ ಆಗಿದೆ.ಟ್ರಂಪ್ ಇದೀಗ ಭಾರತದ ಕೃಷಿ ಡೈರಿ ಮೇಲೆ ಕಣ್ಣಿಟ್ಟಿದ್ದು, ಭಾರತಕ್ಕೆ ಇದು ನುಂಗಲಾರದ ತುತ್ತಾಗಿದೆ.
ಏನಿದು ಟ್ರಂಪ್ ಹೊಸ ನೀತಿ!
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಭಾರತವನ್ನು ಕೃಷಿ ಮಾರುಕಟ್ಟೆ ಒಪ್ಪಂದಕ್ಕೆ ಬರುವಂತೆ ತೀವ್ರವಾಗಿ ಒತ್ತಾಯಿಸುತ್ತಿದ್ದಾರೆ. ಇದರ ಹಿಂದಿರುವ ಉದ್ದೇಶ ಭಾರತೀಯ ಕೃಷಿ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸುವುದು.
ಮೊನ್ನೆಯಷ್ಟೇ ಟ್ರಂಪ್ ಸರಕು ಸಮಾಗ್ರಿಗಳಿಗೆ ಭಾರತದ ಮೇಲೆ ಸುಂಕ ಹೆಚ್ಚಿಸಿತ್ತು. ಇದೀಗ ಭಾರತೀಯ ಕೃಷಿ ಮಾರುಕಟ್ಟೆಯನ್ನು ನಾವು ಹೇಳಿದಂತೆ ನಡೆಸಬೇಕು ಎಂಬ ಹೊಸ ತಕರಾರು ತೆಗೆಯುತ್ತಿದೆ. ಇದು ಭಾರತಕ್ಕೆ ನುಂಗಲಾರದ ತುತ್ತಾಗಿದೆ.
ಟ್ರಂಪ್ ನೀತಿ ಭಾರತಕ್ಕೆ ನುಂಗಲಾರದ ತುತ್ತು!
ಹೌದು,ಟ್ರಂಪ್ ಹೇಳುತ್ತಿರುವ ಈ ಹೊಸ ನೀತಿಯನ್ನು ಭಾರತ ಒಪ್ಪಿದರೂ ಕಷ್ಟ, ಒಪ್ಪದೇ ಇದ್ದರೂ ಕಷ್ಟ ಎನ್ನುವಂತಾಗಿದೆ. ಒಂದು ವೇಳೆ ಅಮೆರಿಕಾ ಹೇಳುವಂತೆ ಭಾರತೀಯ ಕೃಷಿ ಮಾರುಕಟ್ಟೆಯನ್ನು ತೆರೆದರೆ ಅಲ್ಲಿ ಹೆಚ್ಚು ಭಾರತಕ್ಕೆ ನಷ್ಟವಾಗುವ ಸಾಧ್ಯತೆಯಿದೆ.
ಮತ್ತೊಂದೆಡೆ ಈ ನೀತಿಗೆ ಒಪ್ಪದೇ ಹೋದರೆ ಆಟೋಮೊಬೈಲ್ ಕ್ಷೇತ್ರ, ಆಹಾರ ಕ್ಷೇತ್ರ ಹಾಗೂ ವೈದ್ಯಕೀಯ ಕ್ಷೇತ್ರದ ಮೇಲೆ ಭಾರತಕ್ಕೆ ಒತ್ತಡ ಬೀಳಲಿದೆ. ಆಟೋಮೊಬೈಲ್, ಆರೋಗ್ಯ ಹಾಗೂ ಆಹಾರ ಸರಕುಗಳ ಮೇಲೆ ಅಮೆರಿಕಾಕ್ಕೆ ಹೆಚ್ಚು ಪ್ರಾಬಲ್ಯ ಇರುವ ಕಾರಣ ಭಾರತಕ್ಕೆ ಇದು ಸಂಕಷ್ಟ ತಂದೊಡ್ಡಿದೆ.
ಟ್ರಂಪ್ ಅವರ ಈ ನೀತಿಯನ್ನು ಭಾರತ ಇನ್ನೂ ಕೂಡ ಅನುಮೋದಿಸಿಲ್ಲ ಆದರೂ ಕೂಡ ವಿಶ್ವಕ್ಕೆ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಈ ನೀತಿಯಿಂದ ತನ್ನ ಸಣ್ಣತನ ತೋರಿಸಿದಂತಾಗಿದೆ ಎಂದರೆ ತಪ್ಪಾಗಲಾರದು.